ಒಬ್ಬ ಗ್ರಾಹಕ ವರ್ಷಪೂರ್ತಿ ಕಾಂಡೋಮ್ ಖರೀದಿಗಾಗಿ 1 ಲಕ್ಷ ರೂ. ವೆಚ್ಚ ಮಾಡಿದ್ದಾರೆ. 2025ನೇ ಸಾಲಿನಲ್ಲಿ 127 ಆನ್ ಲೈನ್ ಆರ್ಡರ್ ಗಳ ಪೈಕಿ 1 ಕಾಂಡೋಮ್ ಆರ್ಡರ್ ಇರುತ್ತದೆ.
ಹೌದು, ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಮಾರ್ಟ್‌ನ 2025ರ ವರದಿ ಬಿಡುಗಡೆ ಆಗಿದ್ದು, ದೇಶದಲ್ಲಿ ಪ್ರತೀ ವರ್ಷ ಹೆಚ್ಚಾಗುತ್ತಿರುವ ಆನ್ ಲೈನ್ ಶಾಪಿಂಗ್ ಕುರಿತು 2025 ಕುತೂಹಲದ ಅಂಶಗಳನ್ನು ಬಹಿರಂಗಪಡಿಸಿದೆ.
`ಹೌ ಇಂಡಿಯಾ ಇನ್‌ಸ್ಟಾಮಾರ್ಟೆಡ್ 2025’ ಎಂಬ ಶೀರ್ಷಿಕೆಯ ವರದಿಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ 400% ಬೆಳವಣಿಗೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಕಾಂಡೋಮ್ಗಳನ್ನು ಖರೀದಿಸಲಾಗಿದೆ. ಆರ್ಡರ್‌ಗಳಲ್ಲಿ ಶೇ.24ರಷ್ಟು ಹೆಚ್ಚಳವಾಗಿದೆ.
2025ನೇ ಸಾಲಿನಲ್ಲಿ ಚೆನ್ನೈನ ಒಬ್ಬ ಗ್ರಾಹಕ ಕಾಂಡೋಮ್ ಗಾಗಿ 1 ಲಕ್ಷ ರೂ. ಖರ್ಚು ಮಾಡಿದರೆ, ಮುಂಬೈನ ಗ್ರಾಹಕ ರೆಡ್ ಬುಲ್ ಶುಗರ್ ಫ್ರೀಗಾಗಿ 16.3 ಲಕ್ಷ ರೂ ಖರ್ಚು ಮಾಡಿದ್ದಾರೆ. ಹೈದರಾಬಾದ್ ವ್ಯಕ್ತಿ ಗುಲಾಬಿಗಳಿಗಾಗಿ 31,240 ಸಾವಿರ ರೂ ಖರ್ಚು ಮಾಡಿದ್ದಾರೆ. ಚೆನ್ನೈನ ಇನ್‌ಸ್ಟಾಮಾರ್ಟ್ ಬಳಕೆದಾರನೊಬ್ಬ ತನ್ನ ಸಾಕುಪ್ರಾಣಿಗಳ ಅಗತ್ಯ ವಸ್ತು, ಆಹಾರಕ್ಕಾಗಿ 2.41 ಲಕ್ಷ ರೂ ಖರ್ಚು ಮಾಡಿದ್ದಾರೆ. ನೊಯ್ಡಾದ “ಜಿಮ್-ಬ್ರೋ” 1,343 ಪ್ರೋಟೀನ್ ವಸ್ತುಗಳಿಗಾಗಿ 2.8 ಲಕ್ಷ ಖರ್ಚು ರೂ ಮಾಡಿದ್ದಾನೆ.
ಹೈದರಾಬಾದ್ ಮೂಲದ ಐಫೋನ್ ಪ್ರೇಮಿಯೊಬ್ಬರು, ಒಂದೇ ಸಲ ಮೂರು ಐಫೋನ್ 17 ಖರೀದಿಸಲು 4.3 ಲಕ್ಷ ರೂ. ಖರ್ಚು ಮಾಡಿದ್ದಾರೆ. ನೋಯ್ಡಾ ಮೂಲದ ಗ್ರಾಹಕನೊಬ್ಬ ಟೆಕ್ನೋ-ಹಾಲಿಕ್ ಬ್ಲೂಟೂತ್ ಸ್ಪೀಕರ್‌ಗಳು, ಎಸ್‌ಎಸ್‌ಡಿಗಳು ಮತ್ತು ರೋಬೋಟಿಕ್ ವ್ಯಾಕ್ಯೂಮ್‌ಗಳನ್ನು ಒಟ್ಟಿಗೆ ಒಂದೇ ಸಲ 2.69 ಲಕ್ಷ ರೂ. ಕೊಟ್ಟು ಖರೀದಿಸಿದ್ದಾನೆ.
ಬೆಂಗಳೂರಿನ ನಿವಾಸಿಯೊಬ್ಬರು ಧಂತೇರಸ್ ಹಬ್ಬದ ವೇಳೆ ಡೆಲಿವರಿ ಬಾಯ್ಸ್ಗೆ 68,600 ರೂ. ಟಿಪ್ಸ್ ನೀಡಿದ್ದಾರೆ.
ಕರಿಬೇವು, ದಹಿ, ಮೊಟ್ಟೆ, ಹಾಲು ಮತ್ತು ಬಾಳೆಹಣ್ಣುಗಳು ಸೇರಿದಂತೆ ಅಡುಗೆಮನೆಯ ಚಿಕ್ಕಪುಟ್ಟ ವಸ್ತುಗಳಿಗೂ ಜನರು ಆನ್ ಲೈನ್ ಮೊರೆ ಹೋಗುತ್ತಿದ್ದಾರೆ. ಕೊಚ್ಚಿಯಲ್ಲಿ ಒಬ್ಬ ಫ್ಲೇವರ್ ಅಭಿಮಾನಿ 368 ಕರಿಬೇವು ಆರ್ಡರ್‌ಗಳನ್ನು ಮಾಡಿ ಅಚ್ಚರಿ ಮೂಡಿಸಿದ್ದಾರೆ.


