Thursday, December 25, 2025
Google search engine
Homeಕ್ರೀಡೆ5ನೇ ಟೆಸ್ಟ್: ಭಾರತ 224 ರನ್ ಗೆ ಆಲೌಟ್

5ನೇ ಟೆಸ್ಟ್: ಭಾರತ 224 ರನ್ ಗೆ ಆಲೌಟ್

ಮಧ್ಯಮ ವೇಗಿ ಗಸ್ ಅಟ್ಕಿಸನ್ ದಾಳಿಗೆ ತತ್ತರಿಸಿದ ಭಾರತ ತಂಡ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 224 ರನ್ ಗಳ ಸಾಧಾರಣ ಮೊತ್ತಕ್ಕೆ ಆಲೌಟಾಗಿದೆ.

ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 6 ವಿಕೆಟ್ ಗೆ 204 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಭೋಜನ ವಿರಾಮಕ್ಕೂ ಮುನ್ನವೇ 224 ರನ್ ಗೆ ಪತನಗೊಂಡಿದೆ.

ನಿನ್ನೆಯ ಮೊತ್ತಕ್ಕೆ ಕೇವಲ 20 ರನ್ ಪೇರಿಸುವಷ್ಟರಲ್ಲಿ ಉಳಿದ 4 ವಿಕೆಟ್ ಕಳೆದುಕೊಂಡಿತು. ಅದರಲ್ಲೂ ಕೊನೆಯ 4 ವಿಕೆಟ್ ಗಳು 6 ರನ್ ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು.

ನಿನ್ನೆ ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಕರಣ್ ನಾಯರ್ 109 ಎಸೆತಗಳಲ್ಲಿ 8 ಬೌಂಡರಿ ಸೇರಿದ 57 ರನ್ ಬಾರಿಸಿ ಔಟಾದರೆ, ವಾಷಿಂಗ್ಟನ್ ಸುಂದರ್ 26 ರನ್ ಬಾರಿಸಿ ಔಟಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments