Wednesday, December 24, 2025
Google search engine
Homeಕ್ರೀಡೆಅಭಿಗ್ಯಾನ್ ದ್ವಿಶತಕ: ಅಂಡರ್ 19 ಏಷ್ಯಾಕಪ್ ನಲ್ಲಿ ಭಾರತ 7/408

ಅಭಿಗ್ಯಾನ್ ದ್ವಿಶತಕ: ಅಂಡರ್ 19 ಏಷ್ಯಾಕಪ್ ನಲ್ಲಿ ಭಾರತ 7/408

ಮಧ್ಯ ಕ್ರಮಾಂಕದಲ್ಲಿ ಅಭಿಗ್ಯಾನ್ ಕುಂದ್ ಸಿಡಿಸಿದ ದ್ವಿಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 408 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ದುಬೈನಲ್ಲಿ ಮಂಗಳವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 408 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಭಾರತ 10 ಓವರ್ ಆಗುತ್ತಿದ್ದಂತೆ ಅರ್ಧಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿ ಸೇರಿದಂತೆ 3 ವಿಕೆಟ್ ಕಳೆದುಕೊಂಡಿತ್ತು. ವೈಭವ್ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿ ಔಟಾದರು.

ಈ ಹಂತದಲ್ಲಿ ಜೊತೆಯಾದ ವೇದಾಂತ್ ತ್ರಿವೇದಿ ಮತ್ತು ಅಭಿಗ್ಯಾನ್ ಕುಂದ್ 4ನೇ ವಿಕೆಟ್ ಗೆ 209 ರನ್ ಗಳ ಬೃಹತ್ ಜೊತೆಯಾಟದಿಂದ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು.

ವೇದಾಂತ್ ತ್ರಿವೇದಿ 106 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 90 ರನ್ ಬಾರಿಸಿ ಶತಕದ ಹೊಸ್ತಿಲಲ್ಲಿ ಎಡವಿದರೆ, ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಅಭಿಗ್ಯಾನ್ ಕುಂದ್ 125 ಎಸೆತಗಳಲ್ಲಿ 17 ಬೌಂಡರಿ ಮತ್ತು 9 ಸಿಕ್ಸರ್ ಗಳ ಸಹಾಯದಿಂದ 209 ರನ್ ಬಾರಿಸಿ ಅಜೇಯರಾಗಿ ಉಳಿಯುವ ಮೊಲಕ ಟೂರ್ನಿಯ ಚೊಚ್ಚಲ ದ್ವಿಶತಕದ ಸಿಡಿಸಿದ ದಾಖಲೆಗೆ ಪಾತ್ರರಾದರು.

ಮಲೇಷ್ಯಾ ಪರ ಮೊಹಮದ್ ಅಕ್ರಮ್ 5 ವಿಕೆಟ್ ಪಡೆದರೂ ಭಾರತ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ವಿಫಲರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments