ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಹಾಗೂ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಗೆ ಚರ್ಮದ ಕ್ಯಾನ್ಸರ್ ಕಾಣಿಸಿಕೊಂಡಿದ್ದು, 6ನೇ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಜಗತ್ತು ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿರುವ ಮೈಕಲ್ ಕ್ಲಾರ್ಕ್ ಸ್ವತಃ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಕ್ಲಾರ್ಕ್, ನನಗೆ ಚರ್ಮದ ಕ್ಯಾನ್ಸರ್ ಬಂದಿರುವುದು ನಿಜ. ಆಸ್ಟ್ರೇಲಿಯಾದಲ್ಲಿ ಇದು ಸಾಮಾನ್ಯವಾಗಿದೆ. ಈಗಷ್ಟೇ ಒಬ್ಬರು ನನ್ನ ಮೂಗಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ತೆಗ್ದುಕೊಳ್ಳುವುದು ಉತ್ತಮ. ಯಾವುದೇ ಕಾಯಿಲೆ ಆರಂಭದಲ್ಲೇ ಪತ್ತೆಯಾದರೆ ಗುಣಮುಖರಾಗುವುದು ಸುಲಭ ಎಂದು ಹೇಳಿದ್ದಾರೆ.
115 ಟೆಸ್ಟ್. 245 ಏಕದಿನ ಮತ್ತು 34 ಟಿ-20 ಪಂದ್ಯಗಳನ್ನು ಆಡಿರುವ ಕ್ಲಾರ್ಕ್, 2004ರಿಂದ 2015ರವರೆಗೆ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿದ್ದರು. ನಾಯಕರಾಗಿ 74 ಟೆಸ್ಟ್ ಗಳಲ್ಲಿ 47 ಜಯ, 16 ಸೋಲು ಕಂಡಿದ್ದಾರೆ. 139 ಏಕದಿನ ಪಂದ್ಯಗಳನ್ನು ತಂಡದ ನೇತೃತ್ವ ವಹಿಸಿದ್ದಾರೆ.
ಮೈಕಲ್ ಕ್ಲಾರ್ಕ್ 2023ರಲ್ಲಿ ಗಡ್ಡೆ ರೂಪದ ಕಾಯಿಲೆಗೆ ಎದೆ ಭಾಗದಲ್ಲಿ 23 ಹೊಲಿಗೆ ಹಾಕಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕ್ಲಾರ್ಕ್ ಚರ್ಮದ ಕಾಯಿಲೆ ಜಾಗೃತಿ ಅಭಿಯಾನದಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.


