Wednesday, December 24, 2025
Google search engine
Homeಕ್ರೀಡೆ10 ನಿಮಿಷಕ್ಕೆ ಮರಳಿದ ಮೆಸ್ಸಿ: ದರ್ಶನ ಸಿಗದೇ ಮೆಸ್ಸಿ ಅಭಿಮಾನಿಗಳಿಂದ ದಾಂಧಲೆ!

10 ನಿಮಿಷಕ್ಕೆ ಮರಳಿದ ಮೆಸ್ಸಿ: ದರ್ಶನ ಸಿಗದೇ ಮೆಸ್ಸಿ ಅಭಿಮಾನಿಗಳಿಂದ ದಾಂಧಲೆ!

ಸಾವಿರಾರು ರೂಪಾಯಿ ಟಿಕೆಟ್ ಪಡೆದು ಬಂದರೂ ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ನೋಡುವ ಅವಕಾಶ ಸಿಗದ ಕಾರಣ ಆಕ್ರೋಶಗೊಂಡ ಅಭಿಮಾನಿಗಳು ದಾಂಧಲೆ ನಡೆಸಿದ್ದರಿಂದ ಕೋಲ್ಕತಾ ಮೈದಾನ ರಣರಂಗವಾದ ಘಟನೆ ಶನಿವಾರ ಸಂಭವಿಸಿದೆ.

ಶನಿವಾರ ಮುಂಜಾನೆ ಕೋಲ್ಕತ್ತಾಗೆ ಇಂಟರ್ ಮಿಯಾಮಿ ತಂಡದ ಆಟಗಾರರಾದ ರೊಡ್ರಿಗೋ ಡಿ ಪಾಲ್ ಮತ್ತು ಲೂಯಿಸ್ ಸುವಾರೆಜ್ ಜೊತೆ ಆಗಮಿಸಿದ ಮೆಸ್ಸಿ ‘ಗೋಟ್ ಟೂರ್ ಆಫ್ ಇಂಡಿಯಾ’ ಆರಂಭಿಸಿದರು. 14 ವರ್ಷಗಳ ನಂತರ ಭಾರತಕ್ಕೆ ಮರಳಿದ ಮೆಸ್ಸಿಯನ್ನು ನೋಡಲು ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಅವರು ಅರ್ಜೆಂಟೀನಾದ ಧ್ವಜಗಳನ್ನು ಬೀಸುತ್ತಾ ‘ಮೆಸ್ಸಿ ಮೆಸ್ಸಿ’ ಎಂದು ಘೋಷಣೆ ಕೂಗುತ್ತಾ ಭವ್ಯ ಸ್ವಾಗತ ನೀಡಿದರು.

ಮೆಸ್ಸಿ ಮೈದಾನಕ್ಕೆ ಕೆಲವೇ ನಿಮಿಷಗಳ ಕಾಲ ಭೇಟಿ ನೀಡಿದ್ದೂ ಅಲ್ಲದೇ ಅಭಿಮಾನಿಗಳಿಗೆ ದರ್ಶನ ನೀಡದೇ ತೆರಳಿದರು. 70 ಅಡಿ ಎತ್ತರದ ಪ್ರತಿಮೆಯನ್ನು ವರ್ಚೂವಲ್ ಆಗಿ ಅನಾವರಣಗೊಳಿಸಿದರು.

ಮೆಸ್ಸಿ 11.15ಕ್ಕೆ ಮೈದಾನಕ್ಕೆ ಆಗಮಿಸಿದ್ದು, 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಿ ಮರಳಿದರು. ಮೆಸ್ಸಿ ಮೈದಾನಕ್ಕೆ ಒಂದು ಸುತ್ತು ಬರುತ್ತಾರೆ. ಹತ್ತಿರದಿಂದ ನೋಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಮೆಸ್ಸಿ ಮೈದಾನಕ್ಕೆ ಬಾರದೇ ಇರುವುದು ಅಭಿಮಾನಿಗಳು ತೀವ್ರ ನಿರಾಸೆ ಉಂಟು ಮಾಡಿತು.

5ರಿಂದ 25 ಸಾವಿರ ರೂ.ವರೆಗೂ ಹಣ ನೀಡಿ ಟಿಕೆಟ್ ಪಡೆದಿದ್ದ ಅಭಿಮಾನಿಗಳು ಮೆಸ್ಸಿಗೆ ದರ್ಶನ ಆಗದೇ ಅಸಮಾಧಾನಗೊಂಡಿದ್ದು, ಬಾಟಲಿ, ಪೇಪರ್ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆದು ದಾಂಧಲೆ ಮಾಡಿದ್ದಾರೆ. ಅಲ್ಲದೇ ಮೈದಾನದ ವಸ್ತುಗಳನ್ನು ಜಖಂಗೊಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments