Thursday, December 25, 2025
Google search engine
Homeಕ್ರೀಡೆಆರ್ ಸಿಬಿ ಪಂದ್ಯಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಆರ್ ಸಿಬಿ ಪಂದ್ಯಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಬೆಂಗಳೂರು: ಬಿಸಿಲ ಧಗೆಗೆ ಐಪಿಎಲ್ ಕಿಚ್ಚು ತಗುಲಿದ್ದು ತವರಿನ ತಂಡ ಆಡುವೆಲ್ಲ ಪಂದ್ಯಗಳ ಟಿಕೆಟ್ಗಳು ಬಿಸಿ ಜಾಮೂನಿನಂತೆ ಕರಗಿಹೋಗಿವೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ರಜತ್ ಪಡೆ, ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಾರ್ಚ್ 22 ರಂದು ಈಡನ್ ಗಾರ್ಡನ್ಸ್ನಲ್ಲಿ ಎದುರಿಸಲಿದೆ. ತನ್ನ ತವರು ಪಂದ್ಯವನ್ನು ಏಪ್ರಿಲ್ 2ರಂದು ಗುಜರಾತ್ ವಿರುದ್ಧ ಆಡಲಿದೆ. ಇದೀಗ ಈ ಪಂದ್ಯದ ಆನ್ಲೈನ್ ಟಿಕೆಟ್ ಮಾರಾಟವನ್ನು ಇಂದಿನಿಂದ ಆರಂಭಿಸಲಾಗಿದೆ.
ಮಾರ್ಚ್ 19ರಂದು ಆರ್ಸಿಬಿ ತನ್ನ ಮೊದಲ ತವರು ಪಂದ್ಯದ ಟಿಕೆಟ್ಗಳ ಮಾರಾಟವನ್ನು ಆರಂಭಿಸಿತ್ತು. ಆದರೆ ಆನ್ಲೈನ್ ಟಿಕೆಟ್ಗಳ ಮಾರಾಟ ಆರಂಭದವಾದ ಕೆಲವೇ ಗಂಟೆಗಳಲ್ಲಿ ಪ್ರಮುಖ ಸ್ಟಾಂಡ್ಗಳ ಟಿಕೆಟ್ ಮಾರಾಟ ಆಗಿವೆ.
ಈ ಸುದ್ದಿ ಬರೆಯುವ ಹೊತ್ತಿಗೆ ಆರ್ಸಿಬಿ ವೆಬ್ಸೈಟ್ನಲ್ಲಿ ಬಾಕಿ ಇರುವ ಟಿಕೆಟ್ಗಳನ್ನು ಪರಿಶೀಲಿಸಿದಾಗ ಕೇವಲ 2 ಸ್ಟ್ಯಾಂಡ್ಗಳ ಟಿಕೆಟ್ಗಳು ಮಾತ್ರ ಮಾರಾಟಕ್ಕೆ ಲಭ್ಯವಿದ್ದವು.
ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಈ ಸೀಸನ್ನ ಮೊದಲ ಐಪಿಎಲ್ ಪಂದ್ಯ ನಡೆಯಲಿದೆ. ಈ ಪಂದ್ಯದ ಟಿಕೆಟ್ ಬೆಲೆ ನಿರೀಕ್ಷೆಯಂತೆ ದುಬಾರಿಯಾಗಿದೆ.
ಆರ್ಸಿಬಿ ವೆಬ್ಸೈಟ್ನಲ್ಲಿರುವಂತೆ, ಈ ಪಂದ್ಯದ ಕನಿಷ್ಠ ಟಿಕೆಟ್ ಬೆಲೆ 2300 ರೂಗಳಿದ್ದರೆ, ಗರಿಷ್ಠ ಟಿಕೆಟ್ ಬೆಲೆಯನ್ನು 42,000 ರೂಗಳಿಗೆ ನಿಗದಿಪಡಿಸಲಾಗಿದೆ.
ಪ್ರಸ್ತುತ ಇದೀಗ ವೆಬ್ಸೈಟ್ನಲ್ಲಿ ಎರಡು ಸ್ಟ್ಯಾಂಡ್ಗಳ ಟಿಕೆಟ್ಗಳನ್ನು ಖರೀದಿಸಬಹುದಾಗಿದ್ದು, ಅದರಲ್ಲಿ ಒಂದು ಸ್ಟ್ಯಾಂಡ್ನ ಟಿಕೆಟ್ ಬೆಲೆ 20 ಸಾವಿರ ರೂಗಳಿದ್ದರೆ, ಇನ್ನೊಂದು ಸ್ಟ್ಯಾಂಡ್ನ ಟಿಕೆಟ್ ಬೆಲೆ 10 ಸಾವಿರ ರೂ ಆಗಿದೆ.
ಆರ್ಸಿಬಿ ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಾಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್ಗಿಡಿ, ಅಭಿನಂದನ್ ಸಿಂಗ್ ಮತ್ತು ಮೋಹಿತ್ ರಾಥಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments