ತೀವ್ರ ಕುತೂಹಲ ಕೆರಳಿಸಿದ್ದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಎಸೆತದಲ್ಲಿ ಉಂಟಾದ ರನೌಟ್ ವಿವಾದದೊಂದಿಗೆ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ವಡೋದರಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 19.1 ಓವರ್ ಗಳಲ್ಲಿ 164 ರನ್ ಗೆ ಆಲೌಟಾಯಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ರೋಚಕ ಗೆಲುವು ಸಾಧಿಸಿತು.
ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಶೆಫಾಲಿ ವರ್ಮಾ ಮೊದಲ ವಿಕೆಟ್ ಗೆ 60 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಅನುಭವಿಸಿ ಒತ್ತಡಕ್ಕೆ ಸಿಲುಕಿತು. ನಿಕಿ ಪ್ರಸಾದ್ ಮತ್ತು ಸಾರ ಶಿಸ್ತಿನ ದಾಳಿಯಿಂದ ಕೊನೆಯ ಓವರ್ ನಲ್ಲಿ 10 ರನ್ ಗಳಿಸಬೇಕಾಗಿತ್ತು.
ಅರುಂಧತಿ ರೆಡ್ಡಿ ಮತ್ತು ರಾಧ ಯಾದವ್ ಉತ್ತಮ ಪ್ರದರ್ಶನ ನೀಡಿದ್ದರಿಂದ ಕೊನೆಯ ಎಸೆತದಲ್ಲಿ 2 ರನ್ ಗಳಿಸಬೇಕಾಗಿ ಬಂದಿತು. ಈ ಹಂತದಲ್ಲಿ ಪಂದ್ಯ ಸೂಪರ್ ಓವರ್ ಹೋಗುವುದೇ ಎಂಬ ಕುತೂಹಲ ಹೆಚ್ಚಿತ್ತು. ಇಬ್ಬರು ಎರಡು ರನ್ ಓಟ ಪೂರೈಸಿದರು.
ಈ ವೇಳೆ ಮುಂಬೈ ತಂಡದ ನಾಯಕ ಹರ್ಮನ್ ಪ್ರೀತ್ ಕೌರ್ ಆಫ್ ಸೈಡ್ ನಲ್ಲಿ ವೇಗವಾಗಿ ಚೆಂಡು ಸಂಗ್ರಹಿಸಿ ಕೀಪರ್ ನತ್ತ ಎಸೆದರು. ಕೀಪರ್ ಚೆಂಡು ಬೇಲ್ಸ್ ಹಾರಿಸುವುದಕ್ಕೂ ಅರುಂಧತಿ ಕ್ರೀಸ್ ತಲುಪುವುದು ಏಕಕಾಲದಲ್ಲಿ ಉಂಟಾಗಿದ್ದರಿಂದ ಗೊಂದಲ ಉಂಟಾಗಿದ್ದು, ಮುಂಬೈ ಆಟಗಾರ್ತಿಯರು ರನೌಟ್ ನೀಡದೇ ಇದ್ದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮೂರನೇ ಅಂಪೈರ್ ಹಲವಾರು ಪರೀಕ್ಷಿಸಿದಾಗ ಬೇಲ್ಸ್ ಹಾರಿಸಿದಾಗ ವಿಕೆಟ್ ಕೀಪರ್ ಕೈ ಇನ್ನೂ ತಲುಪದೇ ಇರುವುದು ಅಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಬೆನಿಫಿಟ್ ಆಫ್ ಡೌಟ್ ಆಧಾರದ ಮೇಲೆ ಬ್ಯಾಟ್ಸ್ ಮನ್ ಪರ ತೀರ್ಪು ಬಂದಿದ್ದರಿಂದ ಡೆಲ್ಲಿ ತಂಡ ವಿಜೇತ ಎಂದು ಘೋಷಿಸಲಾಯಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ತಂಡ ನ್ಯಾಟ್ ಸಿವಿಯರ್ ಬ್ರಂಟ್ (80) ಮತ್ತು ಹರ್ಮನ್ ಪ್ರೀತ್ ಕೌರ್ (42) ಮೂರನೇ ವಿಕೆಟ್ ಗೆ 73 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಆದರೆ ನಂತರದ ಬ್ಯಾಟ್ಸ್ ಮನ್ ಗಳು ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ದರಿಂದ ತಂಡ ದೊಡ್ಡ ಮೊತ್ತ ಕಲೆಹಾಕುವ ಅವಕಾಶದಿಂದ ವಂಚಿತವಾಯಿತು.
— Lolzzz (@CricketerMasked) February 15, 2025


