ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದ ರದ್ದುಗೊಂಡಿದೆ.
ಬ್ರಿಸ್ಬೇನ್ ನಲ್ಲಿ ಶನಿವಾರ ಆರಂಭಗೊಂಡ 3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟ್ ಮಾಡಲು ಇಳಿದ ಆಸ್ಟ್ರೇಲಿಯಾ ತಂಡ 13.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿದ್ದಾಗ ಸುರಿದ ಮಳೆ ಹಾಗೂ ದಟ್ಟವಾದ ಮೋಡದ ವಾತಾವರಣದ ಕಾರಣ ಅಂಪೈರ್ ಗಳು ದಿನದಾಟ ರದ್ದುಗೊಳಿಸಲು ನಿರ್ಧರಿಸಿದರು.
ನಾಥನ್ [4] ಮತ್ತು ಉಸ್ಮಾನ್ ಖ್ವಾಜಾ [19] ಕ್ರೀಸ್ ನಲ್ಲಿ ಉಳಿದುಕೊಂಡಿದ್ದು ಎಚ್ಚರಿಕೆಯಿಂದ ಆಡುತ್ತಿದ್ದಾರೆ.
ಬಾರ್ಡರ್-ಗಾವಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ 5 ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 1-1ರಿಂದ ಸಮಬಲ ಸಾಧಿಸಿವೆ.
ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಸ್ಪಿನ್ನರ್ ಆರ್.ಅಶ್ವಿನ್ ಬದಲು ರವೀಂದ್ರ ಜಡೇಜಾ ಮತ್ತು ರಾಣಾ ಬದಲು ಅಕ್ಷ್ ದೀಪ್ ಗೆ ಸ್ಥಾನ ನೀಡಲಾಗಿದೆ. ಆದರೆ ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.