ದುಬೈ: ಈಗಾಗಲೇ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಭದ್ರತಪಡಿಸಿಕೊಂಡಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಭಾನುವಾರ ನಡೆಯುವ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಎ ವಿಭಾಗದ ಕಡೆಯ ಪಂದ್ಯದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಸೆಮಿಫೈನಲ್ ಗೂ ಮುನ್ನ ಮಿನಿ ಸಮರವಾಗಿದೆ.ಒಂದು ರೀತಿಯಲ್ಲಿ ಸೆಮಿ ಕಾದಾಟಕ್ಕೆ ಈ ಪಂದ್ಯ ಪೂರ್ವ ಪರದೆ ಎಂದರೂ ತಪ್ಪಿಲ್ಲ. ಉಭಯ ತಂಡಗಳೂ ತಮ್ಮ ಶಸ್ತಾಸ್ತ್ರಗಳನ್ನು ಸಾಣೆ ಹಿಡಿಯಲು ಈ ಅವಕಾಶವನ್ನು ಬಳಸಿಕೊಳ್ಳಲಿವೆ.
ಈ ಪಂದ್ಯದಲ್ಲಿ ಭಾರತಕ್ಕೆ ಮೊಹಮದ್ ಶಮಿ ಸೇವೆ ಲಭಿಸುವುದು ಅನುಮಾನವಾಗಿದೆ. ಇದು ಭಾರತ ತಂಡದ ವ್ಯವಸ್ಥಾಪಕ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಿಮಿಸಿದೆ. ಈ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಬೌಲಿಂಗ್ ದಾಳಿಯನ್ನು ಮತ್ತಷ್ಟು ಮೊನಚು ಮಾಡಲು ಈ ಪಂದ್ಯ ಸಹಕಾರಿಯಾಗಿರುತ್ತಿತ್ತು.
ಗಾಯದ ಸಮಸ್ಯೆಗೆ ಸಿಲುಕಿರುವ ಶಮಿ ಮಾ. 2ರ ಪಂದ್ಯದಲ್ಲಿ ಆಡುವುದು ಅನುಮಾನ ಎಂದೆನಿಸಿದೆ. ಹಾಗಾಗಿ, ಅವರ ಬದಲಿಗೆ ಪಂಜಾಬ್ ನ ವೇಗಿ ಅರ್ಷದೀಪ್ ಸಿಂಗ್ ಆಡುವ ಸಾಧ್ಯತೆಗಳು ದಟ್ಟವಾಗಿವೆ.
ಅಂಕಗಳ ದೃಷ್ಟಿಯಲ್ಲಿ ಈ ಪಂದ್ಯವೇನೂ ಮಹತ್ವದ ಪಂದ್ಯವೇನಲ್ಲ. ಏಕೆಂದರೆ, ಈಗಾಗಲೇ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಹಂತಕ್ಕೆ ಕಾಲಿಟ್ಟಿವೆ. ಭಾರತ ತಂಡ ಮೊದಲ ಸೆಮಿಫೈನಲ್ ನಲ್ಲಿ ಆಡಲಿದ್ದರೆ, ಅತ್ತ ನ್ಯೂಜಿಲೆಂಡ್ ಎರಡನೇ ಸೆಮಿಫೈನಲ್ ನಲ್ಲಿ ಆಡಲಿದೆ.
ಮಾ.2ರ ಪಂದ್ಯದಲ್ಲಿ ಆಡಿದರೆ ಮೊಹಮ್ಮದ್ ಶಮಿಯವರಿಗೆ ತಮ್ಮ ದಾಳಿಯನ್ನು ಮತ್ತಷ್ಟು ಮೊನಚು ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಏಕೆಂದರೆ, ನ್ಯೂಜಿಲೆಂಡ್ ತಂಡದಲ್ಲಿ ಐವರು ಎಡಗೈ ಬ್ಯಾಟ್ಸ್ ಮನ್ ಗಳಿದ್ದಾರೆ. ಅವರನ್ನು ಎದುರಿಸಿದ್ದರೆ ಶಮಿ ಅವರಿಗೆ ಅದು ಮುಂದಿನ ಪಂದ್ಯಗಳಲ್ಲಿ ಶಮಿಗೆ ನೆರವಾಗುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ಅವರು ಗಾಯದ ಸಮಸ್ಯೆಯಿಂದ ಬೇಗನೇ ಗುಣಮುಖರಾದರೆ ಭಾನುವಾರದ ಪಂದ್ಯವನ್ನಾಡಬಹುದು.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಎ ಗುಂಪಿನ ತಂಡದಲ್ಲಿರುವ ಭಾರತ, ತಾನು ಗ್ರೂಪ್ ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿ, ಒಟ್ಟು ನಾಲ್ಕು ಅಂಕಗಳನ್ನು ಕಲೆಹಾಕಿ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದೆ.
ಇದೇ ಸಾಧನೆಯೊಂದಿಗೆ ಎ ಗುಂಪಿನ ಮತ್ತೊಂದು ತಂಡವಾದ ನ್ಯೂಜಿಲೆಂಡ್ ಸಹ ಸೆಮಿಫೈನಲ್ ತಲುಪಿದೆ. ಹಾಗಾಗಿ, ಆ ಎರಡೂ ತಂಡಗಳ ನಡುವೆಯೇ ಮೊದಲ ಸೆಮಿಫೈನಲ್ ಇದೇ ಭಾನುವಾರ (ಮಾ. ೨) ನಡೆಯಲಿದೆ.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ/ ಅರ್ಷ್ದೀಪ್ ಸಿಂಗ್.
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಟಾಮ್ ಲಾಥಮ್ (ವಿಕೆ), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ವಿಲ್ ಒ’ರೂರ್ಕ್.


