ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ತವರಿನ ಪಂದ್ಯದಲ್ಲಿ ಆರ್ ಸಿಬಿ ಏಕಮಾತ್ರ ಬದಲಾವಣೆ ಮಾಡಲಾಗಿದ್ದು, ಭರ್ಜರಿ ಫಾರ್ಮ್ ನಲ್ಲಿರುವ ಜೋಸ್ ಹಾಜ್ಲೆವುಡ್ ಬದಲು ದ.ಆಫ್ರಿಕಾದ ವೇಗಿ ಲುಂಗಿ ನಿಗ್ಡಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಬಹುಶಃ ಕೊನೆಯ ಬಾರಿಗೆ ಧೋನಿ ಐಪಿಎಲ್ ಪಂದ್ಯ ಆಡಲಿದ್ದಾರೆ ಎನ್ನಲಾಗುವ ಈ ಪಂದ್ಯಕ್ಕೆ ಇದ್ದ ಮಳೆ ಭೀತಿ ದೂರವಾಗಿದ್ದು, ಬಹುತೇಕ ಪೂರ್ಣ 40 ಓವರ್ ಗಳ ಪಂದ್ಯ ನಡೆಯಲಿದೆ.


