ಐಪಿಎಲ್ ಟಿ-20 ಟೂರ್ನಿಯ 2025ನೇ ಸಾಲಿನ ಆವೃತ್ತಿ ಮಾರ್ಚ್ 21ರಿಂದ ಆರಂಭಗೊಳ್ಳಲಿದ್ದು, ಮೇ 25ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಐಪಿಎಲ್ ಉಪಾಧ್ಯಕ್ಷ ರಾಜೀವ್ ಶುಕ್ಲ ಹೇಳಿದ್ದಾರೆ.
ಮುಂಬೈನಲ್ಲಿ ಭಾನುವಾರ ನಡೆದ ಬಿಸಿಸಿಐ ಸಭೆಯಲ್ಲಿ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಸಿದ್ಧವಾಗಿದ್ದು, ಉದ್ಘಾಟನಾ ದಿನ ಹಾಗೂ ಫೈನಲ್ ಪಂದ್ಯದ ದಿನಾಂಕ ನಿಗದಿಯಾಗಿದೆ ಎಂದರು.
ಇದೇ ವೇಳೆ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಅಂತಿಮಗೊಂಡಿಲ್ಲ ಎಂದು ಅವರು ಹೇಳಿದರು.
ಮಾರ್ಚ್ 23ರಂದು ಐಪಿಎಲ್ ಉದ್ಘಾಟನೆಯಾಗಲಿದೆ ಎಂದು ತಪ್ಪಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಸರಿಪಡಿಸಿಕೊಂಡು ಮಾರ್ಚ್ 21ರಂದು ನಡೆಯಲಿದೆ ಎಂದು ಘೋಷಿಸಿದರು.