Wednesday, December 24, 2025
Google search engine
Homeಕ್ರೀಡೆರಣಜಿಯಲ್ಲೂ ಕೈಕೊಟ್ಟ ಬ್ಯಾಟಿಂಗ್ ದಿಗ್ಗಜರು: ಮಿಂಚಿದ ಜಡೇಜಾ

ರಣಜಿಯಲ್ಲೂ ಕೈಕೊಟ್ಟ ಬ್ಯಾಟಿಂಗ್ ದಿಗ್ಗಜರು: ಮಿಂಚಿದ ಜಡೇಜಾ

ಗ್ರಹಚಾರ ಕೈಕೊಟ್ಟರೇ ಅದೃಷ್ಟವೂ ಕೈಹಿಡಿಯಲ್ಲ ಎಂಬಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರನ್ ಬರ ಎದುರಿಸುತ್ತಿದ್ದ ಭಾರತ ತಂಡದ ಬ್ಯಾಟಿಂಗ್ ದಿಗ್ಗಜರು ದೇಶೀ ಕ್ರಿಕೆಟ್ ಗೆ ಮರಳಿದರೂ ವಿಫಲರಾಗಿದ್ದಾರೆ. ಅಬ್ಬರದ ಬ್ಯಾಟಿಂಗ್ ನಿಂದ ಹುಲಿಗಳಂತೆ ಮೆರೆಯುತ್ತಿದ್ದ ದಿಗ್ಗಜ ಬ್ಯಾಟ್ಸ್ ಮನ್ ಗಳು ಇಲಿಗಳಂತೆ ಪ್ರದರ್ಶನ ನೀಡಿ ಮುಜುಗರಕ್ಕೆ ಒಳಗಾಗಿದ್ದಾರೆ.

ಗುರುವಾರ ಆರಂಭಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಖಾಡಕ್ಕೆ ಇಳಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶಿವಂ ದುಬೆ ಮತ್ತು ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಎರಡಂಕಿಯ ಮೊತ್ತವನ್ನೂ ದಾಖಲಿಸಿ ನಿರಾಸೆ ಮೂಡಿಸಿದರೆ, ಆಲ್ ರೌಂಡ್ ಪ್ರದರ್ಶನದಿಂದ ರವೀಂದ್ರ ಜಡೇಜಾ ಗಮನ ಸೆಳೆದಿದ್ದಾರೆ.

ಮುಂಬೈನಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸಲ್ಲಿ ರೋಹಿತ್ (3), ಜೈಸ್ವಾಲ್ (4), ಶ್ರೇಯಸ್ (11) ಮತ್ತು ದುಬೆ ರನ್ ಗಳಿಸಿದರೆ ಪಂಜಾಬಿನ ಗಿಲ್ ಕರ್ನಾಟಕದ ವಿರುದ್ಧ 4 ರನ್‌ ಗೆ ಔಟ್ ಆಗಿದ್ದಾರೆ.

ಆಸ್ಟ್ರೇಲಿಯಾ ಸರಣಿ ವಿಫಲರಾಗಿ ಭಾರತ ತಂಡದ ಸೋಲಿಗೆ ಕಾರಣರಾಗಿದ್ದ ಬ್ಯಾಟ್ಸ್ ಮನ್ ಗಳು ಸೇರಿದಂತೆ ಎಲ್ಲರೂ ದೇಶೀಯ ಕ್ರಿಕೆಟ್ ನಲ್ಲಿ ಆಡುವಂತೆ ಸೂಚಿಸಲಾಗಿತ್ತು. ಇದರ ಅನ್ವಯ ದೇಶೀಯ ಕ್ರಿಕೆಟ್ ನತ್ತ ಕಾಲು ಹಾಕದ ಸ್ಟಾರ್ ಆಟಗಾರರು ರಣಜಿಗೆ ಮರಳಿದ್ದಾರೆ.

10 ವರ್ಷಗಳ ಬಳಿಕ ಮುಂಬೈ ಪರ ಕಣಕ್ಕಿಳಿದಿರುವ ರೋಹಿತ್ ಶರ್ಮಾ ಕೇವಲ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ 7 ವರ್ಷಗಳ ಬಳಿಕ ದೆಹಲಿ ಪರ ಬ್ಯಾಟ್ ಬೀಸಿದ ರಿಷಭ್ ಪಂತ್‌ 10 ಎಸೆತಗಳಲ್ಲಿ 1 ರನ್ ಬಾರಿಸಿ ಸೌರಾಷ್ಟ್ರದ ಅನುಭವಿ ಎಡಗೈ ಸ್ಪಿನ್ನರ್ ಧರ್ಮೇಂದ್ರ ಸಿಂಗ್ ಜಡೇಜಾ ಅವರ ಎಸೆತದಲ್ಲಿ ಔಟಾದರು.

ಪಂತ್ 2017-18ರ ಋತುವಿನ ನಂತರ ಮೊದಲ ಬಾರಿಗೆ ಪ್ರಥಮ ದರ್ಜೆ ಪಂದ್ಯದಲ್ಲಿ ದೆಹಲಿ ಪರ ರಾಜ್ ಕೋಟಲ್ಲಿ ಕಾಣಿಸಿಕೊಂಡರು. ಆದರೆ ಮೈದಾನದಲ್ಲಿ ಅವರ ವಾಸ್ತವ್ಯವು ಹೆಚ್ಚು ಕಾಲ ಉಳಿಯಲಿಲ್ಲ.  ಬೆಂಗಳೂರಿನಲ್ಲಿ ನಡೆದ ಪಂಜಾಬ್ ಮತ್ತು ಕರ್ನಾಟಕ ನಡುವಿನ ಪಂದ್ಯದಲ್ಲಿ ಶುಭಮನ್  ಗಿಲ್ (4) ಹಿಂದೆ ಬಿದ್ದರು. ಇನ್ನಿಂಗ್ಸ್ ನ ನಾಲ್ಕನೇ ಓವರ್ ನಲ್ಲಿ ಅವರು ಅಭಿಲಾಷ್ ಶೆಟ್ಟಿಗೆ ಶರಣಾದರು.

ಇದೆಲ್ಲದರ ಮಧ್ಯೆ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಆಕರ್ಷಕ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಅವರಂತಹ ಆಟಗಾರರು ಎಡವಿದರೂ ಜಡೇಜಾ ದೆಹಲಿ ವಿರುದ್ಧ ಸೌರಾಷ್ಟ್ರ ಪರ ಅದ್ಭುತ ಬೌಲಿಂಗ್ ಮಾಡಿ ಐದು ವಿಕೆಟ್ ಪಡೆಯುವ ಮೂಲಕ ಮಿಂಚಿದರು.

ರವೀಂದ್ರ ಜಡೇಜಾ ಅವರ ವಿಶೇಷ ಸ್ಪೆಲ್ ಡೆಲ್ಲಿಯ ಬೆನ್ನೆಲುಬನ್ನು ಮುರಿದಿತು. ಐದು ವಿಕೆಟ್ ಪಡೆಯಲು ಜಡೇಜಾ 17.4 ಓವರ್ ತೆಗೆದುಕೊಂಡರು. ಜಡೇಜಾ ಕೇವಲ 66 ರನ್ ಬಿಟ್ಟುಕೊಟ್ಟು ಐದರ ಸಾಧನೆ ಮೆರೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments