Thursday, December 25, 2025
Google search engine
Homeಕ್ರೀಡೆಕೆಎಲ್ ರಾಹುಲ್ 10ನೇ ಶತಕ, ಮುನ್ನಡೆಗಾಗಿ ಭಾರತ ಹೋರಾಟ

ಕೆಎಲ್ ರಾಹುಲ್ 10ನೇ ಶತಕ, ಮುನ್ನಡೆಗಾಗಿ ಭಾರತ ಹೋರಾಟ

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಸಿಡಿಸಿದ ಶತಕದ ನೆರವಿನಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಮುನ್ನಡೆಗಾಗಿ ಹೋರಾಟ ನಡೆಸಿದೆ.

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 3 ವಿಕೆಟ್ ಗೆ 145 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 254 ರನ್ ಪೇರಿಸಿದೆ.

ಭಾರತ ತಂಡಕ್ಕೆ ರಾಹುಲ್ ಮತ್ತು ರಿಷಭ್ ಪಂತ್ 4ನೇ ವಿಕೆಟ್ ಗೆ 141 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು.

ಗಾಯದ ನಡುವೆ ಅಖಾಡಕ್ಕೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಭೋಜನ ವಿರಾಮದ ವೇಳೆಗೆ ಔಟಾಗುವ ಮುನ್ನ 112 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿ ಔಟಾದರು.

ಮತ್ತೊಂದೆಡೆ ಉತ್ತಮ ಲಯದಲ್ಲಿದ್ದ ಕೆಎಲ್ ರಾಹುಲ್ 177 ಎಸೆತಗಳಲ್ಲಿ 13 ಬೌಂಡರಿ ಒಳಗೊಂಡ 100 ರನ್ ಬಾರಿಸಿ ಮರು ಎಸೆತದಲ್ಲಿಯೇ ಶೋಯೆಬ್ ಬಶೀರ್ ಎಸೆತದಲ್ಲಿ ಔಟಾದರು. ಇದು ಕೆಎಲ್ ರಾಹುಲ್ ಗೆ 10ನೇ ಟೆಸ್ಟ್ ಶತಕವಾಗಿದ್ದು, ಲಾರ್ಡ್ಸ್ ಮೈದಾನದಲ್ಲಿ ಹಾಗೂ ಪ್ರಸ್ತುತ ಸರಣಿಯಲ್ಲಿ 2ನೇ ಶತಕವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments