Home ಕ್ರೀಡೆ RCB ನಾಯಕನಾಗಿ ಕೊಹ್ಲಿ ಡೌಟ್, ಹೊಸ ನಾಯಕನ ಹುಡುಕಾಟದಲ್ಲಿ ಆರ್ ಸಿಬಿ!

RCB ನಾಯಕನಾಗಿ ಕೊಹ್ಲಿ ಡೌಟ್, ಹೊಸ ನಾಯಕನ ಹುಡುಕಾಟದಲ್ಲಿ ಆರ್ ಸಿಬಿ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಖಚಿತ ಉತ್ತರ ಸಿಕ್ಕಿಲ್ಲ.

by Editor
0 comments

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಖಚಿತ ಉತ್ತರ ಸಿಕ್ಕಿಲ್ಲ.

ಫಾಫ್ ಡುಪ್ಲೇಸಿಸ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿಗೆ ಮತ್ತೆ ಮಣೆ ಹಾಕಬಹುದು ಎಂಬ ಮಾತಿತ್ತು. ಆದರೆ ಈಗ ತಂಡವು ಬೇರೆ ಯೋಚನೆಯಲ್ಲಿರುವ ಸುಳಿವು ಸಿಕ್ಕಿದೆ. ಎರಡು ವರ್ಷಗಳ ಹಿಂದೆ ನಾಯಕತ್ವ ತ್ಯಜಿಸಿದ ಕೊಹ್ಲಿಯೇ ಮತ್ತೆ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅನುಮಾನವಾಗಿದೆ.

ಆರ್‌ಸಿ ತಂಡದ ಮುಂದಿನ ನಾಯಕ ಯಾರೆಂಬುದರ ಬಗ್ಗೆ ಇನ್ನೂ ಸಹ ಚರ್ಚೆ ನಡೆದಿಲ್ಲ. ಹೀಗಾಗಿ ಈಗಲೇ ನಾಯಕ ಯಾರೆಂದು ಹೇಳಲಾಗುವುದಿಲ್ಲ ಎಂದು ಕೋಷ್ ಅಂಡಿ ಫ್ಲವರ್ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಮೂರು ವರ್ಷಗಳನ್ನು ಮುಂದಿಟ್ಟುಕೊಂಡು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದೇವೆ ತಿಳಿಸಿದ್ದಾರೆ. ಐಪಿಎಲ್ 2025ರೊಂದಿಗೆ ಆರ್‌ಸಿ ಹೊಸ ಯುಗವನ್ನು ಪ್ರಾರಂಭಿಸಲಿದೆ. ಮುಂದಿನ ಮೂರು ವರ್ಷಗಳ ಪ್ರಯಾಣವು ಇದರೊಂದಿಗೆ ಆರಂಭವಾಗಲಿದ್ದು, ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.

banner

ಹೀಗಾಗಿ ದೀರ್ಘಕಾಲದವರೆಗೆ ತಂಡವನ್ನು ಮುನ್ನಡೆಸಬಲ್ಲ ಆಟಗಾರನಿಗೆ ತಂಡದ ನಾಯಕತ್ವವನ್ನು ನೀಡಲಿದ್ದೇವೆ ಎಂದು ಆಂಡಿ ಫ್ಲವರ್ ತಿಳಿಸಿದ್ದಾರೆ. ಅವರ ಈ ಮಾತು ಕೊಹ್ಲಿ ಹೊರತಾದ ಆಯ್ಕೆಯ ಸೂಚನೆ ಎಂದು ಹೇಳಲಾಗುತ್ತಿದೆ. ಇದಾಗ್ಯೂ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲಿದ್ದೇವೆ ಅಥವಾ ಇಲ್ಲ ಎಂಬುದನ್ನು ಫ್ಲವರ್ ಸ್ಪಷ್ಟಪಡಿಸಿಲ್ಲ.

ಇತ್ತ ಆರ್‌ಸಿ ತಂಡದಲ್ಲಿರುವ 22 ಆಟಗಾರರಲ್ಲಿ ನಾಯಕತ್ವದ ಅನುಭವ ಹೊಂದಿರುವವರು ವಿರಾಟ್ ಕೊಹ್ಲಿ ಮಾತ್ರ. ಹೀಗಾಗಿಯೇ ಆರ್‌ಸಿ ಫ್ರಾಂಚೈಸಿ ಕೊಹ್ಲಿಗೆ ಕ್ಯಾಪ್ಟನ್ ಪಟ್ಟ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಏಕೆಂದರೆ ಕೊಹ್ಲಿ ಆರ್‌ಸಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಕೊಹ್ಲಿ ಮುಂದಾಳತ್ವದಲ್ಲಿ ತಂಡ 66 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಹಾಗೆಯೇ 2016ರಲ್ಲಿ ವಿರಾಟ್ ಕೊಹ್ಲಿಯ ಸಾರಥ್ಯದಲ್ಲಿ ಆರ್‌ಸಿ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಅನುಭವಿ ನಾಯಕ ವಿರಾಟ್ ಕೊಹ್ಲಿಗೆ ಮತ್ತೊಮ್ಮೆ ಕ್ಯಾಪ್ಟನ್ ಪಟ್ಟ ನೀಡಲು ಒತ್ತಡವಂತೂ ಇದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಗೌತಮ್ ಜೊತೆ ಬಿಸಿಸಿಐ ಸಭೆ: ರೋಹಿತ್-ಕೊಹ್ಲಿ ಭವಿಷ್ಯ ನಿರ್ಧಾರ? 10ನೇ ತರಗತಿಯ 80 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮನೆಗೆ ಕಳಿಸಿದ ಪ್ರಿನ್ಸಿಪಾಲ್! ವಿಜಯ್ ಹಜಾರೆ ಟ್ರೋಫಿ: ರೋಚಕ ಜಯ ಸಾಧಿಸಿ ಕರ್ನಾಟಕ ಸೆಮೀಸ್ ಗೆ ಲಗ್ಗೆ ಕೆಎಲ್ ರಾಹುಲ್ ರಜೆ ಮನವಿ ತಿರಸ್ಕರಿಸಿದ ಬಿಸಿಸಿಐ: ಇಂಗ್ಲೆಂಡ್ ಸರಣಿಗೆ ಸಜ್ಜಾಗಲು ಸೂಚನೆ RCB ನಾಯಕನಾಗಿ ಕೊಹ್ಲಿ ಡೌಟ್, ಹೊಸ ನಾಯಕನ ಹುಡುಕಾಟದಲ್ಲಿ ಆರ್ ಸಿಬಿ! 2025ರಲ್ಲಿ ಕುಸಿಯಲಿದೆ ಭಾರತದ ಆರ್ಥಿಕತೆ: ಐಎಂಎಫ್ ಎಚ್ಚರಿಕೆ ಮಹಾರಾಷ್ಟ್ರ ಪಂಚಾಯಿತಿ ಚುನಾವಣೆ: ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು? ದಿಲ್ಲಿ ಮದ್ಯ ನೀತಿಯಿಂದ 2,026 ಕೋಟಿ ಸರ್ಕಾರಕ್ಕೆ ನಷ್ಟ: ಸಿಎಜಿ ವರದಿ ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆ: ಸಚಿವ ಎಂಬಿ ಪಾಟೀಲ ಜಾತಿ- ಧರ್ಮದ ಬೇಲಿ ಇಲ್ಲದ ಕಂಬಳ ಕ್ರೀಡೆ, ಕಲೆ ಸರ್ವರ ಸಂಭ್ರಮ: ಸಿಎಂ ಸಿದ್ದರಾಮಯ್ಯ