Wednesday, December 24, 2025
Google search engine
Homeಕ್ರೀಡೆಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ಇತಿಹಾಸ ಬರೆದ ಮೊಹಮದ್ ಶಮಿ!

ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ಇತಿಹಾಸ ಬರೆದ ಮೊಹಮದ್ ಶಮಿ!

ಭಾರತದ ಮಧ್ಯಮ ವೇಗಿ ಮೊಹಮದ್ ಶಮಿ ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದುಬೈನಲ್ಲಿ ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಜಾಕರ್ ಅಲಿ ಅವರನ್ನು ಔಟ್ ಮಾಡುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದರು.

ಪಂದ್ಯಗಳ ಆಧಾರದ ಮೇಲೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮೊಹಮದ್ ಶಮಿ ಸರಿಗಟ್ಟಿದರೂ ಎಸೆತಗಳ ಆಧಾರದ ಮೇಲೆ ಸ್ಟಾರ್ಕ್ ದಾಖಲೆಯನ್ನು ಮುರಿದು ಮೊದಲ ಸ್ಥಾನ ಆಕ್ರಮಿಸಿಕೊಂಡರು.

ಮಿಚೆಲ್ ಸ್ಟಾರ್ಕ್ 5120 ಎಸೆತಗಳಲ್ಲಿ 200 ವಿಕೆಟ್ ಮೈಲುಗಲ್ಲು ಸ್ಥಾಪಿಸಿದರೆ, ಮಿಚೆಲ್ ಸ್ಟಾರ್ಕ್ 5140 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

ಬಾಂಗ್ಲಾದೇಶ ಒಂದು ಹಂತದಲ್ಲಿ 35 ರನ್ ಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಮೊಹಮದ್ ಶಮಿ ಮೊದಲ ಓವರ್ ನಲ್ಲಿಯೇ ವಿಕೆಟ್ ಪಡೆದು ಭರ್ಜರಿ ಆರಂಭ ನೀಡಿದ್ದರು. ಆದರೆ ಜಾಕಿರ್ ಅಲಿ ಮತ್ತು ತೌಹಿದ್ ಹ್ರಿಬೊಯ್ 6ನೇ ವಿಕೆಟ್ ಗೆ 154 ರನ್ ಜೊತೆಯಾಟದಿಂದ ತಂಡವನ್ನು ಕಾಡಿದರು. ಆದರೆ ಶಮಿ ಈ ಜೊತೆಯಾಟವನ್ನು ಮುರಿಯವ ಮೂಲಕ ವಿಶ್ವದಾಖಲೆಗೆ ಪಾತ್ರರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments