ಒಲಿಂಪಿಕ್ ಚಿನ್ನದ ಪದಕ ವಿಜೇತ ಹಾಗೂ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಜಾವೆಲಿನ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ನೂತನ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ನೀರಜ್ ಚೋಪ್ರಾ 1445ಕ್ಕೆ ತಮ್ಮ ಅಂಕ ಹೆಚ್ಚಿಸಿಕೊಂಡು ನಂ.1 ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಗ್ರೆನೆಡಾದ ಆಂಡರ್ಸನ್ ಪೀಟರ್ 1431 ಅಂಕದೊಂದಿಗೆ 2ನೇ ಸ್ಥಾನಕ್ಕೆ ಕುಸಿದರು. ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಂ 1370 ಅಂಕದೊಂದಿಗೆ 4ನೇ ಸ್ಥಾನ ಗಳಿಸಿದ್ದಾರೆ. ಜರ್ಮನಿಯ ಜೂನಿಯರ್ ವೆಬ್ಬರ್ 3ನೇ ಸ್ಥಾನ ಪಡೆದಿದ್ದಾರೆ.


