ಮಧ್ಯಮ ಕ್ರಮಾಂಕದಲ್ಲಿ ರವಿಚಂದ್ರನ್ ಸ್ಮರಣ್ ಮತ್ತು ಶ್ರೇಯಸ್ ಅಯ್ಯರ್ ಮತ್ತು ಶಿಖರ್ ಶೆಟ್ಟಿ ಮಾರಕ ದಾಳಿಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಚಂಡೀಗಢ ವಿರುದ್ಧ ಇನಿಂಗ್ಸ್ ಹಾಗೂ 185 ರನ್ ಗಳ ಜಯಭೇರಿ ಬಾರಿಸಿದೆ.
ಹುಬ್ಬಳ್ಳಿಯಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಗೆ 547 ರನ್ ಪೇರಿಸಿ ಬೃಹತ್ ಮೊತ್ತ ದಾಖಲಿಸಿತ್ತು. ಚಂಡೀಗಢ ತಂಡ ಮೊದಲ ಇನಿಂಗ್ಸ್ ನಲ್ಲಿ 222 ರನ್ ಗೆ ಆಲೌಟಾಗಿ ಫಾಲೋಆನ್ ಗೆ ಒಳಗಾಗಿತ್ತು. ಎರಡನೇ ಇನಿಂಗ್ಸ್ ಆರಂಭಿಸಿದ ಚಂಡೀಗಢ ತಂಡ 140 ರನ್ ಗೆ ಪತನಗೊಂಡಿತು.
ಪಂದ್ಯದ ಎರಡನೇ ದಿನವಾದ ಮಂಗಳವಾರ 4 ವಿಕೆಟ್ ಗೆ 74 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಚಂಡೀಗಢ ಮನನ್ ವೊಹ್ರಾ (106) ಶತಕದ ಹೊರಾಗಿಯೂ ಶ್ರೇಯಸ್ ಗೋಪಾಲ್ (73/7) ಮಾರಕ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು. ನಂತರ ಎರಡನೇ ಇನಿಂಗ್ಸ್ ನಲ್ಲಿ ಶಿಖರ್ ಶೆಟ್ಟಿ (61/5) ಮತ್ತು ಶ್ರೇಯಸ್ ಗೋಪಾಲ್ (45/3) ಮಾರಕ ದಾಳಿಗೆ ತತ್ತರಿಸಿ 150ರ ಗಡಿಗೂ ಮುನ್ನವೇ ಆಲೌಟಾಯಿತು.


