Thursday, December 25, 2025
Google search engine
Homeಕ್ರೀಡೆರಣಜಿ ಟ್ರೋಫಿ: ಪಂಜಾಬ್ 55 ರನ್ ಗೆ ಆಲೌಟ್, ಕರ್ನಾಟಕಕ್ಕೆ ಭಾರೀ ಮುನ್ನಡೆ

ರಣಜಿ ಟ್ರೋಫಿ: ಪಂಜಾಬ್ 55 ರನ್ ಗೆ ಆಲೌಟ್, ಕರ್ನಾಟಕಕ್ಕೆ ಭಾರೀ ಮುನ್ನಡೆ

ಬೌಲರ್ ಗಳ ಪ್ರಾಬಲ್ಯದಿಂದ ಪಂಜಾಬ್ ತಂಡವನ್ನು ಕಳಪೆ ಮೊತ್ತಕ್ಕೆ ಆಲೌಟ್ ಮಾಡಿದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಭಾರೀ ಮುನ್ನಡೆಯತ್ತ ದಾಪುಗಾಲಿರಿಸಿದೆ.

ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ 29 ಓವರ್ ಗಳಲ್ಲಿ ಮೊದಲ ಇನಿಂಗ್ಸ್ ನಲ್ಲಿ 55 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟ್ ಆಗಿದೆ. ದಿನದಾಂತ್ಯಕ್ಕೆ ಕರ್ನಾಟಕ ತಂಡ 4 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿದ್ದು, ಮೊದಲ ದಿನವೇ 144 ರನ್ ಗಳ ಮುನ್ನಡೆ ಪಡೆದು ಹಿಡಿತ ಸಾಧಿಸಿದೆ.

ಪಂಜಾಬ್ ಅಲ್ಪ ಮೊತ್ತಕ್ಕೆ ಔಟ್ ಮಾಡಿದ ಆತ್ಮವಿಶ್ವಾಸದಲ್ಲಿ ಆಡಲಿಳಿದ ಕರ್ನಾಟಕ ತಂಡಕ್ಕೆ ರವಿಚಂದ್ರನ್ ಸ್ಮರಣ್ ಅರ್ಧಶತಕ ಸಿಡಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ರವಿಚಂದ್ರನ್ ಸ್ಮರಣ್ 100 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 83 ರನ್ ಬಾರಿಸಿ ಔಟಾಗದೇ ಉಳಿಯುವ ಮೂಲಕ ಶತಕದ ಭರವಸೆ ಮೂಡಿಸಿದ್ದಾರೆ. ಇದಕ್ಕೂ ಮುನ್ನ ಕೆವಿ ಅನೀಶ್ (33), ನಾಯಕ ಮಯಂಕ್ ಅಗರ್ ವಾಲ್ (20) ಮತ್ತು ದೇವದತ್ ಪಡಿಕಲ್ (27) ತಂಡಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ತಂಡ ಮಧ್ಯಮ ವೇಗಿ ವಾಸುಕಿ ಕೌಶಿಕ್ ನೇತೃತ್ವದಲ್ಲಿ ಕರ್ನಾಟಕದ ಬೌಲರ್ ಗಳ ಸಂಘಟಿತ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್ ನಲ್ಲಿ 55 ರನ್ ಗೆ ಆಲೌಟ್ ಆಯಿತು.

ಕರ್ನಾಟಕದ ಪರ ಮಾರಕ ದಾಳಿ ಸಂಘಟಿಸಿದ ವಾಸುಕಿ ಕೌಶಿಕ್ 16 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಅಭಿಲಾಷ್ ಶೆಟ್ಟಿ 3, ಪ್ರಸಿದ್ಧ ಕೃಷ್ಣ 2 ಮತ್ತು ಯಶೋವರ್ಧನ್ ಪ್ರತಾಪ್ 1 ವಿಕೆಟ್ ಪಡೆದು ಪಂಜಾಬ್ ಗೆ ಭರ್ಜರಿ ಪಂಚ್ ನೀಡಿದರು.

ಪಂಜಾಬ್ ಪರ ರಮಣದೀಪ್ ಸಿಂಗ್ 16, ಮಯಾಂಕ್ ಮರ್ಕಂಡೆ 12 ರನ್ ಬಾರಿಸಿ ಎರಡಂಕಿಯ ಮೊತ್ತ ದಾಟಿಸಿದರೆ ಉಳಿದ ಬ್ಯಾಟ್ಸ್ ಮನ್ ಗಳ ಒಂದಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments