ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಐಪಿಎಲ್ 2025ರ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದೆ. ಈ ಮೂಲಕ 9 ವರ್ಷಗಳ ನಂತರ ಆರ್ ಸಿಬಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದೆ.
ಮೊಹಾಲಿಯಲ್ಲಿ ಗುರುವಾರ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿ 14.1 ಓವರ್ ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 101 ರನ್ ಗೆ ಆಲೌಟ್ ಮಾಡಿತು.
ಆರ್ ಸಿಬಿ 2016ರ ನಂತರ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದೆ. ಅಲ್ಲದೇ ಒಟ್ಡಾರೆ 4ನೇ ಬಾರಿ ಈ ಸಾಧನೆ ಮಾಡಿತು.
ಸುಲಭ ಗುರಿ ಬೆಂಬತ್ತಿ ಆರ್ ಸಿಬಿ ಆರಂಭಿಕ ಫಿಲ್ ಸಾಲ್ಟ್ ಅವರ ಅರ್ಧಶತಕದ ನೆರವಿನಿಂದ ಆರ್ ಸಿಬಿ 10 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರಂಭಿಕ ಫಿಲ್ ಸಾಲ್ಟ್ 27 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನೊಂದಿಗೆ ಅಜೇಯ 56 ರನ್ ಬಾರಿಸಿದರು. ವಿರಾಟ್ ಕೊಹ್ಲಿ (12), ಮಯಾಂಕ್ ಅಗರ್ ವಾಲ್ (19), ಮತ್ತು ನಾಯಕ ರಜತ್ ಪಟಿದಾರ್ ಅಜೇಯ 15 ರನ್ ಬಾರಿಸಿ ಸುಲಭ ಗೆಲುವು ತಂದುಕೊಟ್ಡರು.


