ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ಐಪಿಎಲ್ ಕ್ವಾಲಿಫೈಯರ್ -1 ಪಂದ್ಯದಲ್ಲಿ 101 ರನ್ ಗೆ ಆಲೌಟಾಗಿದೆ.
ಮೊಹಾಲಿಯಲ್ಲಿ ಗುರುವಾರ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ್ದ ಆರ್ ಸಿಬಿ ಲೀಗ್ ನಲ್ಲಿ ಅಗ್ರಸ್ಥಾನಿ ಪಂಜಾಬ್ ಕಿಂಗ್ಸ್ ತಂಡ 14.1 ಓವರ್ ಗಳಲ್ಲಿ 101 ರನ್ ಪತನಗೊಂಡಿತು. ಇದು ಐಪಿಎಲ್ ಪ್ಲೇಆಫ್ ನಲ್ಲಿ ತಂಡವೊಂದು ದಾಖಲಿಸಿದ ಎರಡನೇ ಕನಿಷ್ಠ ಮೊತ್ತವಾಗಿದೆ.
ಬೌಲರ್ ಗಳಿಗೆ ಹೇಳಿ ಮಾಡಿಸಿದ ಪಿಚ್ ನಲ್ಲಿ ಮಾರಕ ದಾಳಿ ನಡೆಸಿದ ಆರ್ ಸಿಬಿ ಆರಂಭದಿಂದಲೇ ಪಂಜಾಬ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿದರು. ಗಾಯದಿಂದ ಚೇತರಿಸಿಕೊಂಡು ಬಂದ ಜೋಸ್ ಹಾಜ್ಲೆವುಡ್ ಮತ್ತು ಸ್ಪಿನ್ನರ್ ಸುಯೆಶ್ ಕುಮಾರ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಯಶ್ ದಯಾಳ್ 2, ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಪಾರ್ಡ್ ತಲಾ 1 ವಿಕೆಟ್ ಗಳಿಸಿದರು.
ಪಂಜಾಬ್ ಪರ ಸ್ಟೋನಿಸಿಸ್ 36 ರನ್ ಬಾರಿಸಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದರೆ, ಅಜಮತ್ತುಲ್ಲಾ ಒಮರಾಜಿ (18) ಮತ್ತು ಪ್ರಭುಸಿಮ್ರಾನ್ ಸಿಂಗ್ (18) ತಕ್ಕಮಟ್ಟಿಗೆ ಹೋರಾಟ ನಡೆಸಿದರು.


