ಗೋಲಿನ ಸುರಿಮಳೆ ಸುರಿಸಿದ ಭಾರತ ತಂಡ 7-0 ಅಂತರದಿಂದ ಚೀನಾವನ್ನು ಸೋಲಿಸಿ ಏಷ್ಯಾಕಪ್ ಹಾಕಿ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ.
ರಾಜ್ ಗಿರ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಏಕಪಕ್ಷೀಯವಾಗಿ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ ಹಾಕಿದ್ದು, ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನಲ್ಲಿ ಕೊರಿಯಾ ತಂಡವನ್ನು ಎದುರಿಸಲಿದೆ. ಕೊರಿಯಾ ತಂಡ 4-3 ಗೋಲುಗಳಿಂದ ಸೋಲಿಸಿತು.
ಭಾರತ ಫೈನಲ್ ಪ್ರವೇಶಿಸಬೇಕಾದರೆ ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಮಾಡಿಕೊಳ್ಳಬೇಕಿತ್ತು. ಮತ್ತು ಚೀನಾಗೆ ಗೆಲುವು ಸಾಧಿಸಬೇಕಿತ್ತು. ಆದರೆ ಭಾರತ ಡ್ರಾ ಮಾಡಿಕೊಳ್ಳುವ ಯಾವುದೇ ಯೋಚನೆ ಮಾಡದೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಆಟಗಾರರ ಭರ್ಜರಿ ಪ್ರದರ್ಶನದಿಂದ ಗೋಲಿನ ಸುರಿಮಳೆ ಸುರಿಸಿದರು.
ಭಾರತೀಯರು ಎದುರಾಳಿಗೆ ಒಂದೂ ಗೋಲು ಬಿಟ್ಟುಕೊಡದೇ ಅಧಿಪತ್ಯ ಸ್ಥಾಪಿಸಿದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಸವಾಲೊಡ್ಡಿದ್ದ ಚೀನಾ ಈ ಪಂದ್ಯದಲ್ಲಿ ಕೈ ಚೆಲ್ಲಿತು. ಭಾರತದ ಪರ ಅಭಿಷೇಕ್ 2 ಮತ್ತು ಶಿಲಾನಂದ್ ಲಾಕ್ರಾ, ದಿಲ್ಪೀತ್ ಸಿಂಗ್ ಮಂದೀಪ್ ಸಿಂಗ್ ಮತ್ತು ರಾಜ್ ಕುಮಾರ್ ಪಾಲ್ ತಲಾ ಒಂದು ಗೋಲು ಬಾರಿಸಿದರು.


