ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಕಾರ್‍ಯದರ್ಶಿಯಾಗಿ ದೇವ್‌ಜಿತ್ ಸೈಕಿಯಾ ಅಯ್ಕೆಯಾಗುವುದು ನಿಚ್ಚಳವಾಗಿದೆ.
ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ದೇವಜಿತ್ ಸೈಕಿಯಾ ಶನಿವಾರ ನಾಮಪತ್ರ ಸಲ್ಲಿಸಿದ್ದರೆ, ಖಜಾಂಚಿ ಹುದ್ದೆಗೆ ಪ್ರಭ್ತೇಜ್ ಭಾಟಿಯಾ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷವೆಂದರೆ ಈ ಎರಡೂ ಹುದ್ದೆಗಳಿಗೆ ಇವರಿಬ್ಬರ ಹೊರತಾಗಿ ಬೇರೆ ಐಆರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಆಶಿಶ್ ಶೀಲಾರ್ ಅವರ ನಿರ್ಗಮನದಿಂದ ತೆರವಾದ ಖಜಾಂಚಿ ಸ್ಥಾನಕ್ಕೆ ಛತ್ತೀಶ್‌ಗಢ ಕ್ರಿಕೆಟ್ ಸಂಘದ ಭಾಟಿಯಾ ಅರ್ಜಿ ಸಲ್ಲಿಸಿದ್ದಾರೆ.
ಡಿಸೆಂಬರ್ 1ರಂದು ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸೈಕಿಯಾ ಭಾರತೀಯ ಕ್ರಿಕೆಟ್ ಮಂಡಳಿಯ ಮಧ್ಯಂತರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಸೈಕಿಯಾ ಕಾರ್ಯದರ್ಶಿ ಸ್ಥಾನಕ್ಕೆ ಹೋಗಲು ಸಜ್ಜಾಗಿರುವುದರಿಂದ, ಮಂಡಳಿಯು ಅವರ ಸ್ಥಾನವನ್ನು ತುಂಬಲು ಹೊಸ ಜಂಟಿ ಕಾರ್ಯದರ್ಶಿಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಅರುಣ್ ಧುಮಾಲ್ ಮತ್ತು ಧನರಾಜ್ ನಾಥ್ವಾನಿ ಕ್ರಮವಾಗಿ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮತ್ತು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅನ್ನು ಬಿಸಿಸಿಐ ಸಾಮಾನ್ಯ ಮಹಾಸಭೆಯಲ್ಲಿ ನಲ್ಲಿ ಪ್ರತಿನಿಧಿಸಲಿದ್ದಾರೆ.
ಜಿಸಿಎ ಕಾರ್ಯದರ್ಶಿ ಮತ್ತು ಕ್ರಿಕೆಟ್ ಆಡಳಿತದಲ್ಲಿ ಚಿರಪರಿಚಿತ ಹೆಸರಾದ ಅನಿಲ್ ಪಟೇಲ್ ಅವರನ್ನು ಒಂದು ಸ್ಥಾನಕ್ಕೆ ಪರಿಗಣಿಸಬಹುದು ಎಂದು ಊಹಾಪೋಹಗಳು ಇದ್ದವು. ಆದಾಗ್ಯೂ, ಚುನಾವಣಾ ಅಧಿಕಾರಿ ಎ.ಕೆ.ಜ್ಯೋತಿ ಬಿಡುಗಡೆ ಮಾಡಿದ ಕರಡು ಚುನಾವಣಾ ಪಟ್ಟಿಯಲ್ಲಿ ಜಿಸಿಎ ಪ್ರತಿನಿಧಿಯಾಗಿ ನಾಥ್ವಾನಿ ಹೆಸರು ಕಾಣಿಸಿಕೊಂಡಿರುವುದರಿಂದ ಊಹಾಪೋಹಗಳಿಗೆ ಈಗ ತೆರೆ ಬಿದ್ದಿದೆ.
ಗಡುವು ಮುಗಿದ ನಂತರ ಸ್ನೇಹಶಿಶ್ ಗಂಗೂಲಿಯನ್ನು ತನ್ನ ಪ್ರತಿನಿಧಿಯಾಗಿ ಅಸೋಸಿಯೇಷನ್ ಶಿಫಾರಸು ಮಾಡಿದ್ದರೂ ಕರಡು ಮತದಾರರ ಪಟ್ಟಿಯಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಯಾವುದೇ ಪ್ರತಿನಿಧಿಗಳು ಇರಲಿಲ್ಲ.