ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯ ಆರಂಭಕ್ಕೂ ಕೆಲವೇ ಕ್ಷಣಗಳಿರುವಾಗ ಶ್ರೇಯಸ್ ಅಯ್ಯರ್ ಭಾರತ ಎ ತಂಡದ ನಾಯಕತ್ವ ತ್ಯಜಿಸಿದ್ದಾರೆ.
ಮಂಗಳವಾರ ನಡೆದ ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಪ್ರಥಮ ದರ್ಜೆ ಪಂದ್ಯಕ್ಕೆ ಕೆಲವೇ ಕ್ಷಣಗಳಿರುವಾಗ ಶ್ರೇಯಸ್ ಅಯ್ಯರ್ ಭಾರತ ಎ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಧ್ರುವ ಜುರೆಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.
ಭಾರತ ತಂಡದಲ್ಲಿ ಕೊನೆ ಕ್ಷಣದಲ್ಲಿ ನಡೆದ ಹೈಡ್ರಾಮಾ ಕುರಿತು ಆಡಳಿತ ಮಂಡಳಿ ಯಾವುದೇ ಹೇಳಿಕೆ ನೀಡಿಲ್ಲ.
ಶ್ರೇಯಸ್ ಅಯ್ಯರ್ ದಿಢೀರನೆ ನಾಯಕತ್ವ ತ್ಯಜಿಸಿದ್ದೂ ಅಲ್ಲದೇ ತಂಡವನ್ನು ತೊರೆದು ಮುಂಬೈಗೆ ಮರಳಿದ್ದಾರೆ. ಕೌಟುಂಬಿಕ ಸಮಸ್ಯೆಯೋ ಅಥವಾ ಏನು ಎಂಬ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಅಯ್ಯರ್ ಈ ಹಿಂದಿನ ಪಂದ್ಯಗಳಲ್ಲಿ 8 ಮತ್ತು 13 ರನ್ ಗಳಿಸಿದ್ದರು. ಕಳಪೆ ಪ್ರದರ್ಶನ ನೀಡಿದ್ದೂ ಅಲ್ಲದೇ ಕಳಪೆ ಅಂಪೈರಿಂಗ್ ಗಾಗಿ ಅಂಪೈರ್ ಹಾಗೂ ಮ್ಯಾಚ್ ರೆಫರಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದರು.


