Thursday, December 25, 2025
Google search engine
Homeಕ್ರೀಡೆದ್ರಾವಿಡ್, ಗವಾಸ್ಕರ್ ದಾಖಲೆ ಮುರಿದ ಗಿಲ್: ಈ ಸಾಧನೆ ಮಾಡಿದ ಏಷ್ಯಾದ ಮೊದಲಿಗ!

ದ್ರಾವಿಡ್, ಗವಾಸ್ಕರ್ ದಾಖಲೆ ಮುರಿದ ಗಿಲ್: ಈ ಸಾಧನೆ ಮಾಡಿದ ಏಷ್ಯಾದ ಮೊದಲಿಗ!

ಭಾರತ ತಂಡದ ನಾಯಕ ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಹಲವು ಐತಿಹಾಸಿಕ ದಾಖಲೆಗಳನ್ನು ಬರೆದಿದ್ದಾರೆ.

ಬರ್ಮಿಂಗ್ ಹ್ಯಾಮ್ ನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಗಿಲ್ ಸಿಡಿಸಿದ ದ್ವಿಶತಕದ ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ 587 ರನ್ ಗೆ ಆಲೌಟಾಯಿತು.

ಗಿಲ್ 311 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಅಂತಿಮವಾಗಿ ಗಿಲ್ 387 ಎಸೆತಗಳಲ್ಲಿ 30 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 269 ರನ್ ಗಳಿಸಿ ಔಟಾದರು. ಈ ಮೂಲಕ ವಿದೇಶದಲ್ಲಿ ನಾಯಕನಾಗಿ ದ್ವಿಶತಕ ಸಿಡಿಸಿದ ಎರಡನೇ ಭಾರತೀಯ ಎನಿಸಿಕೊಂಡರು. ಅಲ್ಲದೇ ಅತೀ ಹೆಚ್ಚು ರನ್ ಬಾರಿಸಿದ ಭಾರತೀಯ ನಾಯಕ ಎಂಬ ಮತ್ತೊಂದು ಗೌರವಕ್ಕೆ ಪಾತ್ರರಾದರು.

ಎಸ್ ಇ ಎನ್ ಎ ದೇಶಗಳಲ್ಲಿ ದ್ವಿಶತಕ ಸಿಡಿಸಿದ ಏಷ್ಯಾದ ಮೊದಲ ನಾಯಕ ಹಾಗೂ ಈ ಸಾಧನೆ ಮಾಡಿದ ಅತೀ ಕಿರಿಯ ಎಂಬ ಮತ್ತೊಂದು ದಾಖಲೆ ಬರೆದರು.

ಇದಕ್ಕೂ ಮುನ್ನ 2016ರಲ್ಲಿ ವಿರಾಟ್ ಕೊಹ್ಲಿ ನಾರ್ಥ್ ಸೌಂಡ್ ನಲ್ಲಿ 200 ರನ್ ಗಳಿಸಿದ್ದರೆ, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 2011ರಲ್ಲಿ ಲಾರ್ಡ್ಸ್ ನಲ್ಲಿ 193 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಸಾಧನೆ ಆಗಿತ್ತು.

ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ರನ್ ಬಾರಿಸಿದ ಸುನೀಲ್ ಗಾವಸ್ಕರ್ ಮತ್ತು ರಾಹುಲ್ ದ್ರಾವಿಡ್ ದಾಖಲೆಯನ್ನು ಗಿಲ್ ಮುರಿದರು. ಗವಾಸ್ಕರ್ 1979ರಲ್ಲಿ 221 ರನ್ ಗಳಿಸಿದ್ದರೆ, 2002ರಲ್ಲಿ ರಾಹುಲ್ ದ್ರಾವಿಡ್ ಗಳಿಸಿದ್ದ 217 ಹಾಗೂ ಸಚಿನ್ ತೆಂಡೂಲ್ಕರ್ ಬಾರಿಸಿದ್ದ 193 ರನ್ ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments