Wednesday, December 24, 2025
Google search engine
Homeಕ್ರೀಡೆಅಂಡರ್-19 ಏಷ್ಯಾಕಪ್: ಭಾರತ 10 ವಿಕೆಟ್ ಜಯಭೇರಿ

ಅಂಡರ್-19 ಏಷ್ಯಾಕಪ್: ಭಾರತ 10 ವಿಕೆಟ್ ಜಯಭೇರಿ

ಆರಂಭಿಕರಾದ 13 ವರ್ಷದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮಾತ್ರೆ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಯುಎಇ ವಿರುದ್ಧ 10 ವಿಕೆಟ್ ಜಯ ಸಾಧಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ ತಂಡವನ್ನು 44 ಓವರ್ ಗಳಲ್ಲಿ 137 ರನ್ ಗೆ ಆಲೌಟ್ ಮಾಡಿದ ಭಾರತ ತಂಡ 16.1 ಓವರ್ ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಜಯಭೇರಿ ಬಾರಿಸಿತು.

ಕಳೆದೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ 13 ವರ್ಷದ ವೈಭವ್ ಸೂರ್ಯವಂಶಿ 51 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್ ಸೇರಿದಂತೆ 67 ರನ್ ಸಿಡಿಸಿ ಗಮನ ಸೆಳೆದರೆ, ಆಯುಷ್ ಮಾತ್ರೆ 46 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 76  ರನ್ ಚಚ್ಚಿದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುಎಇ ತಂಡದ ಆರಂಭ ಕಳಪೆ ಆಗಿತ್ತು. ಆರಂಭಿಕರು ರನ್ ಕಲೆ ಹಾಕುವಲ್ಲಿ ವಿಫಲರಾದರು.

ಇದರ ಪರಿಣಾಮ 17 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಯುಎಇ ಪರ ಎಥನ್ ಡಿಸೋಜಾ 17 ರನ್ ಸೇರಿಸಿ ಮೂರನೇ ವಿಕೆಟ್ ರೂಪದಲ್ಲಿ ಔಟ್ ಆದರು.

ಯುಎಇ ತಂಡದ ಪರ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಅಕ್ಷತ್ ರಾಜ್ 26 ರನ್‌ಗಳಿಗೆ ಆಟ ಮುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ರಯಾನ್ 48 ಎಸೆತಗಳಲ್ಲಿ 35 ರನ್ ಸಿಡಿಸಿದರು.

ಉಳಿದಂತೆ ಉದ್ದೀಶ್ ಸೂರಿ 16 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಯುಎಇ ಪರ ಯಾವ ಬ್ಯಾಟರ್ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಟೀಮ್ ಇಂಡಿಯಾದ ಕರಾರುವಕ್ ದಾಳಿಗೆ ಯುಎಇ ಕುಸಿತ ಕಂಡಿತು.

ಭಾರತದ ಪರ ಯುಧಾಜಿತ್ ಗುಹಾ 15 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಚೇತನ್ ಶರ್ಮಾ ಹಾಗೂ ಕರ್ನಾಟಕದ ಯುವ ಆಟಗಾರ ಹಾರ್ದಿಕ್ ರಾಜ್ ತಲಾ ಎರಡು ವಿಕೆಟ್ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments