ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳೊಂದಿಗೆ ತನ್ನದೇ ಬ್ರ್ಯಾಂಡ್ ರೂಪಿಸಿಕೊಂಡಿರುವ ವಿರಾಟ್ ಕೊಹ್ಲಿ ಇದೀಗ 40 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ತನ್ನದೇ ಬ್ರ್ಯಾಂಡ್ ನೊಂದಿಗೆ ಕ್ರೀಡಾ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.
ಸುಮಾರು ೮ ವರ್ಷಗಳ ಕಾಲ ಪುಮಾ ಪಾದರಕ್ಷೆ ಕಂಪನಿಯ ರಾಯಭಾರಿಯಾಗಿದ್ದ ವಿರಾಟ್ ಕೊಹ್ಲಿ ಇದೀಗ ಅಗಿಲಿಟಸ್ ಸ್ಪೋರ್ಟ್ಸ್ ಕಂಪನಿಯ ಪಾಲುದಾರಿಕೆ ಪಡೆದಿದ್ದಾರೆ.
ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಪ್ರಕಟಿಸಿದ ವಿರಾಟ್ ಕೊಹ್ಲಿ ಈ ವಿಷಯ ಪ್ರಕಟಿಸುವ ಮೂಲಕ ಅಧಿಕೃತವಾಗಿ ಘೋಷಿಸಿದರು.
Today marks the beginning of an exciting new chapter straight from my heart. A new journey begins for one8 and Agilitas, driven by purpose and ambition. Taking one8 home to Agilitas. pic.twitter.com/mZDoKitq2c
— Virat Kohli (@imVkohli) December 8, 2025
ಓನ್8 ಜೀವನಶೈಲಿಯ ಬ್ರ್ಯಾಂಡ್ ಕಂಪನಿ ಹೊಂದಿರುವ ವಿರಾಟ್ ಕೊಹ್ಲಿ ಪುಮಾ ಕಂಪನಿಯ ಜೊತೆ 8 ವರ್ಷಗಳ 300 ಕೋಟಿ ರಾಯಭಾರಿ ಒಪ್ಪಂದ ಮುಕ್ತಾಯಗೊಂಡಿತ್ತು. ಈ ಒಪ್ಪಂದ ಮುಕ್ತಾಯಗೊಳ್ಳುತ್ತಿದ್ದಂತೆ ವಿರಾಟ್ ಕೊಹ್ಲಿ ಅಗಿಲಿಟಿಸ್ ಸ್ಪೋರ್ಟ್ಸ್ ಕಂಪನಿಯಲ್ಲಿ 40 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
“ಇಂದು ನನ್ನ ಹೃದಯದಿಂದ ಒಂದು ರೋಮಾಂಚಕಾರಿ ಸುದ್ದಿ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. one8 ಮತ್ತು Agilitas ಗಾಗಿ ಹೊಸ ಪ್ರಯಾಣವು ಉದ್ದೇಶ ಮತ್ತು ಮಹತ್ವಾಕಾಂಕ್ಷೆಯಿಂದ ನಡೆಸಲ್ಪಡುತ್ತದೆ. one8 ಅನ್ನು Agilitas ಗೆ ಮನೆಗೆ ಕರೆದೊಯ್ಯುತ್ತದೆ” ಎಂದು ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
Agilitas ಸ್ಪೋರ್ಟ್ಸ್ ಎಂಬುದು ಪೂಮಾ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಸಹ-ಸ್ಥಾಪಿಸಿದ ಕ್ರೀಡಾ ಉಡುಪುಗಳ ಸ್ಟಾರ್ಟ್ಅಪ್ ಆಗಿದೆ.


