ಬ್ಯಾಟಿಂಗ್ ನಲ್ಲಿ ಹಲವು ದಾಖಲೆ ಬರೆದಿರುವ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಫಿಲ್ಡಿಂಗ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ದುಬೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕುಶ್ದಿಲ್ ಶಾಹ ಕ್ಯಾಚ್ ಪಡೆಯುವ ಮೂಲಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಫೀಲ್ಡಿಂಗ್ ವೇಳೆ 158 ಕ್ಯಾಚ್ ಪಡೆದರು. ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಫೀಲ್ಡಿಂಗ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ದಾಖಲೆ ಬರೆದರು.
ಸ್ಪಿನ್ನರ್ ಕುಲದೀಪ್ ಎಸೆದ 47ನೇ ಓವರ್ ನ ಎರಡನೆ ಎಸೆತದಲ್ಲಿ ನಸೀಮ್ ಶಾಹ ಕ್ಯಾಚ್ ಪಡೆಯುವ ಮೂಲಕ ಅಜರುದ್ದೀನ್ ದಾಖಲೆ ಮುರಿದರು. ನಂತರ 50ನೇ ಓವರ್ ನಲ್ಲಿ ಕುಶ್ದಿಲ್ ಶಾಹ ಬಾರಿಸಿದ ದೊಡ್ಡ ಹೊಡೆತದಲ್ಲಿ ಬೌಂಡರಿ ಬಳಿ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ 158ನೇ ಕ್ಯಾಚ್ ಪಡೆದರು. ಈ ಫೀಲ್ಡಿಂಗ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಅವರ ದಾಖಲೆಯನ್ನು ಹಿಂದಿಕ್ಕಿದರು.
ಮೊಹಮದ್ ಅಜರುದ್ದೀನ್ 334 ಪಂದ್ಯಗಳಲ್ಲಿ 156 ಕ್ಯಾಚ್ ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು. ಕೊಹ್ಲಿ 229 ಪಂದ್ಯಗಳಲ್ಲಿ 158 ಕ್ಯಾಚ್ ಪಡೆಯುವ ಮೂಲಕ ಈ ದಾಖಲೆ ಮುರಿದರು. ಸಚಿನ್ ತೆಂಡೂಲ್ಕರ್ 463 ಪಂದ್ಯಗಳಲ್ಲಿ 140 ಕ್ಯಾಚ್ ಪಡೆದು ಮೂರನೇ ಸ್ಥಾನದಲ್ಲಿದ್ದರೆ, ರಾಹುಲ್ ದ್ರಾವಿಡ್ 340 ಪಂದ್ಯಗಳಲ್ಲಿ 124 ಕ್ಯಾಚ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಸುರೇಶ್ ರೈನಾ 226 ಪಂದ್ಯಗಳಲ್ಲಿ 102 ಕ್ಯಾಚ್ ಪಡೆದು ಅಗ್ರ 5ರಲ್ಲಿ ಸ್ಥಾನ ಗಳಿಸಿದ್ದಾರೆ.


