ಭಾರತ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ-20 ಸರಣಿಗೆ ಶ್ರೀಲಂಕಾ ತಂಡ ಪ್ರಕಟಿಸಲಾಗಿದ್ದು, ಚರಿತ್ ಅಸ್ಲಂಕಾ ಅವರನ್ನು ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ.
ಟಿ-20 ವಿಶ್ವಕಪ್ ನಲ್ಲಿ ನೀಡಿದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ನೈತಿ ಹೊಣೆ ಹೊತ್ತು ವಹಿಂದು ಹಸರಂಗ ನಾಯಕತ್ವ ತ್ಯಜಿಸಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಚರಿತ್ ಅಸ್ಲಂಕಾ ಅವರನ್ನು ನೇಮಕ ಮಾಡಲಾಗಿದೆ. ಭಾರತ ತಂಡ ಮೊದಲ ಟಿ-20 ಪಂದ್ಯವನ್ನು ಜುಲೈ 27ರಂದು ಆಡಲಿದೆ.
ಮಂಗಳವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಶ್ರೀಲಂಕಾ ಟಿ-20 ತಂಡವನ್ನು ಪ್ರಕಟಿಸಿದ್ದು, ಹಸರಂಗ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ 2 ಟಿ-20 ಪಂದ್ಯಗಳಲ್ಲಿ ಮುನ್ನಡೆಸಿದ ಅನುಭವವನ್ನು ಚರಿತ್ ಹೊಂದಿದ್ದಾರೆ. 19 ವರ್ಷದೊಳಗಿನವರ ಶ್ರೀಲಂಕಾ ತಂಡದ ನಾಯಕ ಹಾಗೂ ಎಲ್ ಎಲ್ ಪಿ ಟೂರ್ನಿಯಲ್ಲಿ ಜಾಫ್ನಾ ಕಿಂಗ್ಸ್ ತಂಡದ ನಾಯಕರಾಗಿಯೂ ಸಾಕಷ್ಟು ಅನುಭವ ಗಳಿಸಿದ್ದಾರೆ.
ಶ್ರೀಲಂಕಾ ಟಿ-20 ತಂಡ
ಚರಿತ್ ಅಸ್ಲಂಕಾ (ನಾಯಕ), ಪಾಥುಮ್ ನಿಶಾಂಕಾ, ಕುಶಾಲ್ ಜನಿತ್ ಪೆರೆರಾ (ವಿ.ಕೀ.), ಅವಿಷ್ಕಾ ಫೆರ್ನಾಂಡೊ, ಕುಶಾಲ್ ಮೆಂಡಿಸ್ (ವಿ.ಕೀ.), ದಿನೇಶ್ ಚಂಡಿಮಾಲ್, ಕಮಿಂಡು ಮೆಂಡಿಸ್, ಡಸುನ್ ಸನಕ, ವಹಿಂದು ಅಸರಂಗ, ಡುನಿತ್ ವೆಲ್ಲಾಲಗೆ, ಮಹೇಶ್ ತೀಕ್ಷಣ, ಚಮಿಂಡು ವಿಕ್ರಮಸಿಂಘೆ, ಮಥೀಶಾ ಪತಿರಾಣಾ, ನುವಾನ್ ತುಷಾರ, ದುಷ್ಮಂತ ಚಮಿರಾ, ಬಿನುರಾ ಫೆರ್ನಾಂಡೊ.