ನಾಲ್ಕು ವರ್ಷಗಳ ವಿಳಂಬದ ನಂತರ ಕೇಂದ್ರ ಸರ್ಕಾರ 2025ರಿಂದ ದೇಶಾದ್ಯಂತ ಜನಗಣತಿ ಆರಂಭಿಸಲಿದ್ದು, 2026ರ ವೇಳೆಗೆ ಪ್ರಕ್ರಿಯೆ ಅಂತ್ಯಗೊಳಿಸುವ ಸಾಧ್ಯತೆ ಇದೆ.
ಜನಗಣತಿ ಪ್ರಕ್ರಿಯೆ ಅಂತ್ಯಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಲೋಕಸಭಾ ಸ್ಥಾನಗಳ ಗಡಿ ಪುನರ್ ಪರಿಶೀಲನೆ ನಡೆಸಲಿದ್ದು, ಇದರಿಂದ 2028ರ ಚುನಾವಣೆ ವೇಳೆಗೆ ಲೋಕಸಭಾ ಸ್ಥಾನಗಳ ಪುನರ್ವಿಂಗಣೆ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜನಗಣತಿ ಜೊತೆಗೆ ಜಾತಿ ಗಣತಿ ನಡೆಯಬೇಕು ಎಂದು ಪ್ರತಿಪಕ್ಷಗಳು ಸೇರಿದಂತೆ ನಾನಾ ಸಂಘಟನೆಗಳಿಂದ ಒತ್ತಡಗಳು ಕೇಳಿ ಬಂದಿರುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಕೇಂದ್ರ ಸರ್ಕಾರ, ಜಾತಿ ಗಣತಿ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿದೆ.
ಜಾತಿ ಗಣತಿ ನಡೆಯದೇ ಇದ್ದರೂ ಸಾಮಾನ್ಯ ಮತ್ತು ಎಸ್ಸಿ/ಎಸ್ಟಿ ಸಮುದಾಯದ ಒಳಪಂಗಡಳ ಕುರಿತು ಮಾಹಿತಿ ಸಂಗ್ರಹಿಸಲಿದೆ ಎಂದು ಹೇಳಲಾಗಿದೆ. ಸಮುದಾಯ ಹಾಗೂ ಸಾಮಾಜಿಕ ಸ್ಥಾನಮಾನದ ಕುರಿತು ಅಂಕಿ-ಅಂಶ ಸರ್ವೆ ನಡೆಸಲಿದೆ.