ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮೂರನೇ ಬಾರಿಯ ಬಾಹ್ಯಕಾಶ ಯಾತ್ರೆ ಕೊನೆಯ ಕ್ಷಣದಲ್ಲಿ ರದ್ದಾಗಿದೆ.
ಗಗನಯಾತ್ರೆಗೆ ಮಹಿಳೆಯರಿಗೆ ಆದರ್ಶವಾಗಿರುವ ಸುನೀತಾ ವಿಲಿಯಮ್ಸ್ ಅಮೆರಿಕದ ನಾಸಾದ ನೂತನ ಬಾಹ್ಯಕಾಶ ನೌಕೆಯಲ್ಲಿ ಶನಿವಾರ ಸಂಜೆ ಬಾಹ್ಯಕಾಶ ಯಾತ್ರೆ ಆರಂಭಿಸಬೇಕತ್ತು. ಆದರೆ ಕೊನೆಯ ಗಳಿಕೆಯಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದ ಕೇವಲ 3 ನಿಮಿಷ 51 ಸೆಕೆಂಡ್ ಗಳ ಮುನ್ನ ಉಡಾವಣೆ ರದ್ದುಗೊಂಡಿತು.
ಚೊಚ್ಚಲ ಬಾಹ್ಯಕಾಶ ಪ್ರವಾಸದ ನೌಕೆಯಲ್ಲಿ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬೌಚ್ ವಿಲ್ ಮೋರ್ ನೌಕೆಯಲ್ಲೇ ಉಳಿದುಕೊಂಡಿದ್ದು, ಉಡಾವಣೆಯನ್ನು ಮುಂದೂಡಲಾಗಿದ್ದು, ಅಧಿಕೃತ ಸಮಯ ಮತ್ತು ದಿನಾಂಕ ಘೋಷಣೆಯಾಗಬೇಕಿದೆ.
ಫ್ಲೋರಿಡಾದ ಬಾಹ್ಯಕಾಶ ಕೇಂದ್ರದಿಂದ ಅಟ್ಲಾಸ್ ವಿ ರಾಕೆಟ್ ಹೊಂದಿರುವ ಬೋಯಿಂಗ್ ಸ್ಟಾರ್ ಲೈನರ್ ನೌಕೆ ಶನಿವಾರ ರಾತ್ರಿ 10 ಗಂಟೆಗೆ ಉಡಾವಣೆ ಆಗಬೇಕಿತ್ತು.
ನೌಕೆಯಲ್ಲಿದ್ದ ಇಬ್ಬರೂ ಗಗನಯಾತ್ರಿಗಳು ಸುರಕ್ಷಿತವಾಗಿದ್ದು 24 ಗಂಟೆಗಳ ಕಾಲ ಪರಿಶೀಲನೆ ನಡೆಸಿ ತಾಂತ್ರಿಕ ದೋಷ ಸರಿಪಡಿಸಿದ ನಂತರ ನೌಕೆ ಉಡಾವಣೆಯ ದಿನಾಂಕ ಘೋ಼ಷಣೆಯಾಗಲಿದೆ.