ಸುಪ್ರೀಂಕೋರ್ಟ್ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗಡುವು ಮುಗಿಯುವ ಮುನ್ನವೇ ಕೇಂದ್ರ ಚುನಾವಣಾ ಆಯೋಗಕ್ಕೆ ಎಲೆಕ್ಟ್ರೋ ಬಾಂಡ್ ವಿವರ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲೆಕ್ಟ್ರೋ ಬಾಂಡ್ ವಿವರ ನೀಡಲು ಸುಪ್ರೀಂಕೋರ್ಟ್ ಮುಂದೆ 3 ತಿಂಗಳ ಕಾಲವಕಾಶ ಕೇಳಿತ್ತು. ಆದರೆ ಕಾಲವಕಾಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಮಾರ್ಚ್ 12 ರಂದು ಕಚೇರಿ ಅವಧಿ ಮುಗಿಯು ಮುನ್ನ ಚುನಾವಣಾ ಆಯೋಗಕ್ಕೆ ವರದಿ ನೀಡುವಂತೆ 24 ಗಂಟೆಗಳ ಗಡುವು ನೀಡಿತ್ತು.
ಕೇಂದ್ರ ಚುನಾವಣಾ ಆಯೋಗವು ತನ್ನ ಎಕ್ಸ್ ಖಾತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲೆಕ್ಟ್ರೋ ಬಾಂಡ್ ವಿವರ ನೀಡಿರುವುದಾಗಿ ಹೇಳಿಕೊಂಡಿದೆ. ಅಲ್ಲದೇ ಎಸ್ ಬಿಐ ಮುಚ್ಚಿದ ಲಕೋಟೆಯಲ್ಲಿ ಎಲೆಕ್ಟ್ರೋ ಬಾಂಡ್ ವಿವರವನ್ನು ಸುಪ್ರೀಂಕೋರ್ಟ್ ಗೆ ಹಾಜರುಪಡಿಸಿದೆ.