ಆಸ್ಪತ್ರೆಯಲ್ಲಿ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಲು ಸುಪ್ರೀಂಕೋರ್ಟ್ ರಾಷ್ಟ್ರೀಯ ಕಾರ್ಯಪಡೆ ರಚಿಸಿದ್ದು, 3 ವಾರಗಳಲ್ಲಿ ಮಧ್ಯಂತರ ವರದಿ ನೀಡುವಂತೆ ಸೂಚಿಸಿದೆ.
ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಮಂಗಳವಾರ ಪ್ರಸ್ತುತ ದೇಶದಲ್ಲಿರುವ ಕಾನೂನು ವೈದ್ಯರ ರಕ್ಷಣೆಗೆ ಸಾಕಾಗುವುದಿಲ್ಲ. ಆದ್ದರಿಂದ ಕಾನೂನು ಬಲಿಷ್ಠಗೊಳಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಪಡೆ 2 ತಿಂಗಳಲ್ಲಿ ಪೂರ್ಣ ಪ್ರಮಾಣದ ವರದಿ ನೀಡುವಂತೆ ಸೂಚಿಸಿದೆ.
ಸರ್ಜನ್ ವೈಸ್ ಅಡ್ಮಿರಲ್ ಆರ್.ಸರಿನ್, ಡಾ.ಡಿ.ನಾಗೇಶ್ವರ್ ರೆಡ್ಡಿ, ಡಾ.ಎಂ. ಶ್ರೀನಿವಾಸ್, ಡಾ.ಪ್ರತಿಮಾ ಮೂರ್ತಿ, ಡಾ.ಗೋವಾರ್ದನ್ ದತ್ ಪುರಿ, ಡಾ.ಸೌಮಿತ್ರಾ ರಾವತ್, ಪ್ರೊ.ಅನಿತಾ ಸಕ್ಸೆನಾ, ದೆಹಲಿಯ ಏಮ್ಸ್ ಆಸ್ಪತ್ರೆಯ ಕಾರ್ಡಿಯಾಲಿಜಿಸ್ಟ್ ಮುಖ್ಯಸ್ಥೆ ಪ್ರೊ.ಪಲ್ಲವಿ ಸಪ್ರೆ, ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜು ಡೀನ್ ಡಾ.ಪದ್ಮ ಶ್ರೀವಾತ್ಸವ ಮುಂತಾದವರು ಸುಪ್ರೀಂಕೋರ್ಟ್ ನಿಯೋಜಿಸಿದ ಕಾರ್ಯಪಡೆಯಲ್ಲಿದ್ದಾರೆ.