ಭೇಷರತ್ ಕ್ಷಮೆಯಾಚನೆಯನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್ ಇದೀಗ ಪತಂಜಲಿ ಮುಖ್ಯಸ್ಥ ಬಾಬಾ ರಾಮ್ ದೇವ್ ಗೆ ತಮ್ಮ ಕಂಪನಿಗಳ ಉತ್ಪನ್ನಗಳ ಜಾಹಿರಾತು ಮಟ್ಟದಲ್ಲೇ ಕ್ಷಮೆಯಾಚಿಸಿ ಎಂದು ಸೂಚಿಸಿದೆ.
ಆಧುನಿಕ ವೈದ್ಯ ಪದ್ಧತಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿಂದ ನ್ಯಾಯಾಂಗ ನಿಂದನೆ ಎದುರಿಸುತ್ತಿರುವ ಬಾಬಾ ರಾಮ್ ದೇವ್ 67 ದಿನ ಪತ್ರಿಕೆಗಳಲ್ಲಿ ಕ್ಷಮೆ ಕೋರಿ ಜಾಹಿರಾತು ನೀಡುವುದಾಗಿ ಹೇಳಿದರು.
ಪ್ರತಿ ಜಾಹಿರಾತಿಗೆ 10 ಲಕ್ಷ ರೂ. ವೆಚ್ಚವಾಗಲಿದ್ದು, 67 ದಿನಪತ್ರಿಕೆಗಳಲ್ಲಿ ಕ್ಷಮೆ ಕೋರಿ ಜಾಹಿರಾತು ನೀಡುವುದಾಗಿ ಹೇಳಿದಾಗ, ಪತಂಜಲಿ ಕಂಪನಿಗಳ ಜಾಹಿರಾತುಗಳಿಗೆ ನೀಡುತ್ತಿದ್ದ ಅಳತೆ ಹಾಗೂ ಈಗ ನೀಡುತ್ತಿರುವ ಜಾಹಿರಾತುಗಳ ಅಳತೆಯನ್ನು ವಿವರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಪತ್ರಿಕೆಗಳಲ್ಲಿ ಪತಂಜಲಿ ಸಂಸ್ಥೆಯ ಜಾಹಿರಾತು ಯಾವ ಅಳತೆಯಲ್ಲಿ ನೀಡುತ್ತಿದ್ದಿರೋ ಅದೇ ಅಳತೆಯಲ್ಲಿ ಕ್ಷಮೆ ಕೋರಿದ ಜಾಹಿರಾತು ಕೂಡ ಬರುತ್ತೆ ತಾನೇ ಎಂದು ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಸ್ಪಷ್ಟನೆ ಕೋರಿದೆ.