ಟಿ-20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯ ಹಂತಕ್ಕೆ ಬಂದ ಬೆನ್ನಲ್ಲೇ ಸೂಪರ್-8 ಹಂತದ ಗುಂಪು ಹಾಗೂ ಪಂದ್ಯಗಳ ವಿವರಗಳನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ.
ಲೀಗ್ ನಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತ ತಂಡ ಸೂಪರ್-8ರ ಗುಂಪು-1ರಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿದ್ದರೆ, ಗುಂಪು-2ರಲ್ಲಿ ಅಮೆರಿಕ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಗಳಿವೆ.
ಭಾರತ ತಂಡ ಸೂಪರ್-8 ಹಂತದಲ್ಲಿ ಜೂನ್ 20ರಂದು ಮೊದಲ ಪಂದ್ಯವಾಡಲಿದ್ದು, ಆಫ್ಘಾನಿಸ್ಥಾನ ತಂಡವನ್ನು ಎದುರಿಸಲಿದೆ. ಜೂ.22ರಂದು ಬಾಂಗ್ಲಾದೇಶ ಹಾಗೂ ಜೂ.24ರಂದು ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಸವಾಲು ಪಡೆಯಲಿದೆ.
ಅಮೆರಿಕದಲ್ಲಿ ಟೂರ್ನಿಯ ಪಂದ್ಯಗಳು ಮುಕ್ತಾಯಗೊಂಡಿದ್ದು, ಇದೀಗ ವೆಸ್ಟ್ ಇಂಡೀಸ್ ನಲ್ಲಿ ಪ್ರಮುಖ ಹಂತದ ಪಂದ್ಯಗಳು ನಡೆಯಲಿವೆ. ಭಾರತ ಮೊದಲ ಪಂದ್ಯವನ್ನು ಬಾರ್ಬಡಾಸ್ ನಲ್ಲಿ ಆಡಲಿದೆ.