ಮದ್ಯ ನೀತಿಯಿಂದ ಸರ್ಕಾರಕ್ಕೆ 2002 ಕೋಟಿ ನಷ್ಟ: ಸಿಎಜಿ ವರದಿ ಖಂಡಿಸಿದ ಆಪ್ 15 ಶಾಸಕರ ಅಮಾನತು!
ಆಮ್ ಆದ್ಮಿ ಪಕ್ಷದ ಮದ್ಯ ನೀತಿಯಿಂದ ರಾಜ್ಯ ಸರ್ಕಾರಕ್ಕೆ 2002 ಕೋಟಿ ರೂ. ನಷ್ಟವುಂಟಾಗಿದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಕರ ವರದಿಯನ್ನು ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಯಿತು. ಮಂಗಳವಾರ ಆರಂಭಗೊಂಡ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸಿಎಜಿ ವರದಿಯನ್ನು ಮಂಡಿಸಿದರು. ವರದಿಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಸದಸ್ಯರು ಪ್ರತಿಭಟಿಸಿದರು. ಈ ಹಿನ್ನೆಲೆಯಲ್ಲಿ…
ದೆಹಲಿಗೆ ಬರಬೇಕಿದ್ದ 280 ಪ್ರಯಾಣಿಕರಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ: ರೋಮ್ ನಲ್ಲಿ ತುರ್ತು ಭೂಸ್ಪರ್ಶ
ನವದೆಹಲಿ: ನ್ಯೂಯಾರ್ಕ್‌ನ ಜಾನ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟ್ಟಿದ್ದ ಅಮೆರಿಕದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಕಾರಣ ವಿಮಾನವನ್ನು ರೋಮ್‌ನಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಯಿತು. ತೀವ್ರ ತಪಾಸಣೆಯ ನಂತರ ಇದೊಂದು ಹುಸಿಕರೆ ಎಂಬುದು ದೃಢಪಟ್ಟು ವಿಮಾನ ದೆಹಲಿಗೆ ತನ್ನ ಪ್ರಯಾಣ ಮುಂದುವರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 280 ಪ್ರಯಾಣಿಕರಿದ್ದ ಬೋಯಿಂಗ್ 787-9…
ಕುಂಭಮೇಳಕ್ಕೆ ಕರೆದೊಯ್ದು ಪತ್ನಿ ಕತ್ತು ಸೀಳಿ ಹತ್ಯೆಗೈದ ಪತಿ!
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪತ್ನಿಯನ್ನು ಕರೆದೊಯ್ದ ಪತ್ನಿ ಆಕೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ. ದೆಹಲಿಯ ತ್ರಿಲೋಕ್ ಪುರಿ ನಿವಾಸಿ ಅಶೋಕ್ ಕುಮಾರ್ ಪತ್ನಿ ಮೀನಾಕ್ಷಿಯನ್ನು ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕುಂಭಮೇಳಕ್ಕೆ ಕರೆದೊಯ್ಯುವುದಾಗಿ ಕರೆದುಕೊಂಡು ಬಂದಿದ್ದ ಅಶೋಕ್ ಕುಮಾರ್, ಪ್ರಯಾಗ್ ರಾಜ್ ನಲ್ಲಿ ಸುತ್ತಾಡುತ್ತಾ ಫೋಟೊ, ವೀಡಿಯೋಗಳನ್ನು ಸೆರೆಹಿಡಿದು…
ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾಗೆ ಒಲಿದ ದೆಹಲಿ ಸಿಎಂ ಸ್ಥಾನ!
ದೆಹಲಿ ಮುಖ್ಯಮಂತ್ರಿ ಆಗಿ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ 27 ವರ್ಷಗಳ ನಂತರ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಮಹಿಳೆಗೆ ಮಣೆ ಹಾಕಿದೆ. ಶಾಲಿಮಾರ್ ಭಾಗ್ ಕ್ಷೇತ್ರದಿಂದ ಮೊದಲ ಬಾರಿ ಶಾಸಕಿ ಆಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಆರ್ ಎಸ್ ಎಸ್ ಸಕ್ರಿಯ ಕಾರ್ಯಕರ್ತೆ ಆಗಿದ್ದಾರೆ….
ಭಾರತದಲ್ಲಿವೆ 29,000 ಅಧಿಕೃತ ಡ್ರೋಣ್: ಕರ್ನಾಟಕದಲ್ಲಿ ಎಷ್ಟಿವೆ ಗೊತ್ತಾ?
ದೇಶದಲ್ಲಿ ಒಟ್ಟಾರೆ 29,500ಕ್ಕೂ ಹೆಚ್ಚು ಅಧಿಕೃತ ನೋಂದಣಿ ಆದ ಡ್ರೋಣ್ ಗಳು ಇದ್ದು, ರಾಜಧಾನಿ ದೆಹಲಿಯಲ್ಲಿಯೇ 4,882 ಡ್ರೋಣ್ ಗಳು ಹಾರಾಡುತ್ತಿವೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಷ್ಟ್ರ ರಾಜಧಾನಿಯ ನಂತರ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 4,688 ಮತ್ತು 4,132 ಡ್ರೋಣ್ ಗಳು ನೋಂದಾಯಿತವಾಗಿವೆ. ಜನವರಿ 29ರವರೆಗೆ ನವೀಕರಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯದ ದತ್ತಾಂಶವು 29,501…
150 ಕೋಟಿ ವೆಚ್ಚದಲ್ಲಿ ದೆಹಲಿಯ ಆರ್ ಎಸ್ಸೆಸ್ ಕಚೇರಿ ಪುನರ್ ನವೀಕರಣ!
ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿ 150 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದ್ದು, 2 ದಶಕದ ನಂತರ ಹಳೆಯ ಪ್ರಧಾನ ಕಚೇರಿಗೆ ಮರಳಲು ಸಿದ್ಧತೆ ನಡೆದಿದೆ. ದೆಹಲಿಯ ಹಳೆಯ 2 ಅಂತಸ್ತಿನ ಕಟ್ಟಡ ಇದೀಗ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 12 ಅಂತಸ್ತುಗಳಿಗೆ ಎತ್ತರಿಸಲಾಗಿದೆ. 3.75 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ 300 ಕೊಠಡಿಗಳು…
ದೆಹಲಿಗೆ ಮಹಿಳಾ ಸಿಎಂ: ಬಿಜೆಪಿ ಹೊಸ ಕಾರ್ಯತಂತ್ರ?
ದೆಹಲಿಯಲ್ಲಿ ಭರ್ಜರಿ ಗೆಲುವಿನೊಂದಿಗೆ 2 ದಶಕದ ನಂತರ ಅಧಿಕಾರ ಹಿಡಿದಿರುವ ಬಿಜೆಪಿ ಮಹಿಳಾ ಸಿಎಂ ನೇಮಕ ಮಾಡಲು ಚಿಂತನೆ ನಡೆಸಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 48ರಲ್ಲಿ ಗೆಲುವು ಸಾಧಿಸಿದ ಬಿಜೆಪಿ 27 ವರ್ಷದ ನಂತರ ಅಧಿಕಾರದ ಗದ್ದುಗೆ ಹಿಡಿದಿದೆ. ಇದರಿಂದ 10 ವರ್ಷಗಳ ಆಮ್ ಆದ್ಮಿ ಪಕ್ಷದ ಆಡಳಿತಕ್ಕೆ ತೆರೆಬಿದ್ದಿದೆ. ಬಿಜೆಪಿ…
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದೆ RSS ಕಾರ್ಯತಂತ್ರ!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ದಕ್ಕಿದ ಗೆಲುವಿನ ಹಿಂದೆ ಆರ್ ಎಸ್ ಎಸ್ ಕಾರ್ಯತಂತ್ರ ಹಾಗೂ ಶ್ರಮ ಕಾರಣ ಎಂಬುದು ಇದೀಗ ಬೆಳಕಿಗೆ ಬರುತ್ತಿದೆ. ಆಮ್ ಆದ್ಮಿ ಪಕ್ಷದ ಉಚಿತ ಯೋಜನೆಗಳಿಂದ ಸತತ ಸೋಲುಂಡಿದ್ದ ಬಿಜೆಪಿಗೆ ದೆಹಲಿ ಗದ್ಧುಗೆ ಮರೀಚಿಕೆಯಾಗಿತ್ತು. ಆದರೆ ಆರ್ ಎಸ್ ಎಸ್ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು…
ದಿಲ್ಲಿ ಮದ್ಯ ನೀತಿಯಿಂದ 2,026 ಕೋಟಿ ಸರ್ಕಾರಕ್ಕೆ ನಷ್ಟ: ಸಿಎಜಿ ವರದಿ
ನವದೆಹಲಿ: ದೆಹಲಿ ಸರ್ಕಾರದ ಈಗ ರದ್ದುಪಡಿಸಿದ ಮದ್ಯ ನೀತಿಯ ಅನುಷ್ಠಾನದಲ್ಲಿ ಅಕ್ರಮಗಳಿಂದಾಗಿ ಬೊಕ್ಕಸಕ್ಕೆ 2,026 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ಸೋರಿಕೆಯಾಗಿರುವ ಸಿಎಜಿ ವರದಿಯು ಪರವಾನಗಿಗಳನ್ನು ನೀಡುವಲ್ಲಿನ ಗಮನಾರ್ಹ ಲೋಪಗಳು, ನೀತಿ ವ್ಯತ್ಯಾಸಗಳು ಮತ್ತು ಉಲ್ಲಂಘನೆಗಳನ್ನು ಎತ್ತಿ ತೋರಿಸಿವೆ. ನೀತಿಯು ತನ್ನ ಉದ್ದೇಶಿತ ಗುರಿಗಳನ್ನು ಸಾಧಿಸಲು ವಿಫಲವಾಗಿದೆ ಮತ್ತು ಎಎಪಿ…
ಪರೀಕ್ಷೆ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ!
ಶಾಲೆಯಲ್ಲಿ ಪರೀಕ್ಷೆ ತಪ್ಪಿಸಿಕೊಳ್ಳಲು ನಗರದ 23 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ ಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಗರದ ಪ್ರಮುಖ ಶಾಲೆಗಳಿಗೆ ಹುಸಿ ಬಾಂಬ್ ಕರೆ ಬರುತ್ತಿರುವುದರಿಂದ ತಲೆಕೆಡಿಸಿಕೊಂಡಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದು, ಈತ ಶಾಲೆಯ ಪರೀಕ್ಷೆ ತಪ್ಪಿಸಿಕೊಳ್ಳಲು 12ನೇ ತರಗತಿ ವಿದ್ಯಾರ್ಥಿ ಎಂದು…