Kannadavahini

ಬಾರಿಸು ಕನ್ನಡ ಡಿಂಡಿಮವ

shivamogga

ಶಿವಮೊಗ್ಗದಲ್ಲಿ ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

ಭಾಲ್ಕಿ: ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ನಿನ್ನೆ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ…

Jogfalls ಮಾರ್ಚ್ 15ರವರೆಗೆ ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ

ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ಸುಮಾರು ಎರಡೂವರೆ ತಿಂಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಜನವರಿ 1ರಿಂದ ಮಾರ್ಚ್​ 15ರವರೆಗೆ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೋಗ ಜಲಪಾತದ ಮುಖ್ಯದ್ವಾರ ಮತ್ತು ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ…

ಶಿವಮೊಗ್ಗ: ಕಾರಿನ ಬ್ಯಾನೆಟ್ ಮೇಲೆ ಪೊಲೀಸ್ ಪೇದೆಯನ್ನು 100 ಮೀ. ಎಳೆದೊಯ್ದ ಚಾಲಕ!

ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯನ್ನು ಕಾರು ಚಾಲಕ ಕಾರಿನ ಬ್ಯಾನೆಟ್ ಮೇಲೆ 100 ಮೀ. ದೂರದವರೆಗೆ ಎಳೆದೊಯ್ದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಾಹನ ತಪಾಸಣೆಗಾಗಿ ಕಾರು ನಿಲ್ಲಿಸಿದ ಸಂಚಾರ ಠಾಣೆ ಪೊಲೀಸ್ ಪೇದೆ ಜೊತೆ ವಾಗ್ವಾದ ನಡೆಸಿದ ಕಾರು ಚಾಲಕ ಕಾರು ನಿಲ್ಲಿಸದೇ ವಾಹನ ಚಲಾಯಿಸಿದ್ದಾನೆ. ಅಡ್ಡ ನಿಂತಿದ್ದ ಪೇದೆ ಕಾರಿನ ಬ್ಯಾನೆಟ್ ಏರಿದರೂ…

ಹೆಬ್ಬಾವು ಅಲ್ಲ, ಸಂಚಾರಿ ನಿಯಮ ಉಲ್ಲಂಘಿಸಿದ ಉದ್ದದ ದಂಡದ ಬಿಲ್: ಚಾಲಕನ ಜೊತೆ ಪೊಲೀಸರ ಫೋಟೊ!

ಸಾಮಾನ್ಯವಾಗಿ ಹೆಬ್ಬಾವು ಹಿಡಿದಾಗ ಹಿಡಿದವರು ತಲೆಯಿಂದ ಬಾಲದವರೆಗೂ ಎಲ್ಲರೂ ಹಿಡಿದುಕೊಂಡು ಫೋಟೊಗೆ ಫೋಜ್ ಕೊಡೋದು ಸಾಮಾನ್ಯ. ಆದರೆ ಇಲ್ಲಿ ಪೊಲೀಸರು ಹೆಬ್ಬಾವು ಹಿಡಿದಂತೆ ಸಂಚಾರಿ ನಿಯಮ ಉಲ್ಲಂಘಿಸಿದ ರಸೀದಿಯನ್ನು ಹಿಡಿದು ಫೋಜ್ ಕೊಟ್ಟಿದ್ದಾರೆ. ಹೌದು, ಪದೇಪದೆ ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ನೀಡಿದ ದಂಡದ ಬಿಲ್ ಉದ್ದ ನೋಡಿ ಆಶ್ಚರ್ಯಚಕಿತರಾದ ಪೊಲೀಸರು ಚಾಲಕನ ಜೊತೆ…

ಕಳಪೆ ನಿರ್ವಹಣೆ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ!

ವಿಮಾನ ನಿಲ್ದಾಣದ ನಿರ್ವಹಣೆ ಕಳಪೆ ಹಾಗೂ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಯಾನ ನಿರ್ದೇಶನಾಲಯ 20 ಲಕ್ಷ ರೂ. ದಂಡ ವಿಧಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೋಟಿಸ್ ಜಾರಿ ಮಾಡಿದ್ದು, 20 ಲಕ್ಷ ರೂ. ದಂಡವನ್ನು ನೊಟೀಸ್ ತಲುಪಿದ 30 ದಿನಗಳ ಒಳಗೆ ಪಾವತಿಸಬೇಕು ಎಂದು ವಿಮಾನಯಾನ ನಿರ್ದೇಶನಾಲಯ ಆಪರೇಷನ್ಸ್ ವಿಭಾಗದ ನಿರ್ದೇಶಕ…

ಶಿವಮೊಗ್ಗದಲ್ಲಿ ವೃದ್ಧ ಬಲಿ: ರಾಜ್ಯದಲ್ಲಿ ಝೀಕಾ ವೈರಸ್ ಗೆ ಮೊದಲ ಬಲಿ!

ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ 73 ವರ್ಷ ದ ವೃದ್ಧ ಝೀಕಾ ವೈರಸ್ ಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೊದಲ ಬಲಿ ವರದಿಯಾಗಿದೆ. ಜೂನ್ 24ರಂದು ವ್ಯಕ್ತಿಗೆ ಝಿಕಾ ವೈರಸ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಅಸುನೀಗಿದ್ದಾರೆ. ರಾಜ್ಯದಲ್ಲಿ ಒಟ್ಟು 9 ಝಿಕಾ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ ಶಿವಮೊಗ್ಗದಲ್ಲಿ ಮೂರು ಹಾಗೂ ಬೆಂಗಳೂರಲ್ಲಿ…

ಸಕ್ಕರೆಬೈಲಿನಲ್ಲಿ ಅದ್ಧೂರಿಯಾಗಿ ನಡೆದ ಆನೆಗೆ ನಾಮಕರಣ ಶಾಸ್ತ್ರ!

ಹೊಸದಾಗಿ ಶಿಬಿರಕ್ಕೆ ಸೇರಿಕೊಂಡ ಆನೆಗೆ ಅದ್ಧೂರಿಯಾಗಿ ಹಾಗೂ ಶಾಸ್ತ್ರೋಕ್ತವಾಗಿ ನಾಮಕಾರಣ ಶಾಸ್ತ್ರ ಮಾಡುವ ಮೂಲ ಮಲೆನಾಡು ಶಿವಮೊಗ್ಗದಲ್ಲಿ ಆನೆ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗಿದೆ. ಮೂಡಿಗೆರೆಯ ಆಲ್ದೂರ್ ರೇಂಜ್ ನಲ್ಲಿ ಸೆರೆ ಸಿಕ್ಕ ಕಾಡಾನೆಯನ್ನ ಪಳಗಿಸಿ ಬಿಡಾರಕ್ಕೆ ಸೇರಿಸಿಕೊಳ್ಳಲಾಗಿದ್ದು, ಸೋಮವಾರ ಶಾಸ್ತ್ರೋಕ್ತವಾಗಿ `ಅಶ್ವತ್ಥಾಮ’ ಎಂದು ನಾಮಕರಣ ಮಾಡಲಾಗಿದೆ. ಅರ್ಜುನ, ಸಾಗರ, ಕೃಷ್ಣ, ಬಹದ್ದೂರು, ಅಭಿಮನ್ಯು ಮುಂತಾದ ಆನೆಗಳು…

ಶಿವಮೊಗ್ಗದಲ್ಲಿ ಸಾಕಿದ ಬೆಕ್ಕಿಗೆ ಬಲಿಯಾದ ಮಹಿಳೆ!

ಸಾಕುಪ್ರಾಣಿಗಳಿಂದಲೇ ಮನೆಯವರು ಬಲಿಯಾದ ಘಟನೆ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವುದು ಕೇಳಿದ್ದೇವೆ. ಆದರೆ ಮನೆಯಲ್ಲಿ ಸಾಕಿದ ಬೆಕ್ಕು ಮನೆಯ ಯಜಮಾನಿಯ ಜೀವ ತೆಗೆದ ಘಟನೆ ಕೇಳಿದ್ದೀರಾ? ಹೌದು ಅಂತಹದ್ದೊಂದು ಘಟನೆ ಮಲೆನಾಡು ಶಿವಮೊಗ್ಗದಲ್ಲಿ ನಡೆದಿದೆ. ಸಾಮಾನ್ಯವಾಗಿ ಬೆಕ್ಕು ಕಚ್ಚಿ ಸಾಯುವ ಪ್ರಕರಣಗಳು ಅಪರೂಪ. ಆದರೆ ಬೆಕ್ಕು ಕಚ್ಚಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತರಲಘಟ್ಟದಲ್ಲಿ ನಡೆದಿದ್ದು,…

ಮದುವೆ ಆಗುವುದಾಗಿ ವಿಚ್ಛೇದಿತ ಮಹಿಳೆಗೆ ವಂಚನೆ: ವಿಜಯಪುರದಲ್ಲಿ ಬಿಜೆಪಿ ಮುಖಂಡ ಶರತ್ ಕಲ್ಯಾಣಿ ಬಂಧನ

ಮದುವೆ ಆಗುವುದಾಗಿ ವಿಚ್ಛೇದಿತ ಮಹಿಳೆಯನ್ನು ನಂಬಿಸಿ ವಂಚಿಸಿದ ಬಿಜೆಪಿ ಜಿಲ್ಲಾ ಮುಖಂಡ ಶರತ್ ಕಲ್ಯಾಣಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಮದುವೆ ಆಗುವುದಾಗಿ ವಂಚಿಸಿದ್ದೂ ಅಲ್ಲದೇ 4 ಲಕ್ಷ ರೂ. ಪಡೆದು ವಾಪಸ್ ನೀಡದೇ ಉಂಡು ಹೋದ ಕೊಂಡು ಹೋದ ಎಂಬಂತೆ ಶಿವಮೊಗ್ಗ ಜಿಲ್ಲಾ ಸಾಮಾಜಿಕ ಜಾಲತಾಣದ ಮುಖ್ಯಸ್ಥನಾಗಿರುವ ಶರತ್ ಕಲ್ಯಾಣಿ ವಂಚಿಸಿದ್ದಾನೆ. ಶರತ್ ಕಲ್ಯಾಣಿ ವಿರುದ್ಧ…

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಡಿಪಿಆರ್‌ಗೆ ಕೇಂದ್ರದ ಒಪ್ಪಿಗೆ: ಇಂಧನ ಸಚಿವ ಜಾರ್ಜ್‌ ಹರ್ಷ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌)ಗೆ ಕೇಂದ್ರ ವಿದ್ಯುತ್‌ ಪ್ರಾಧಿಕಾರ ಶುಕ್ರವಾರ ಅನುಮೋದನೆ ನೀಡಿದೆ. ಕರ್ನಾಟಕ ವಿದ್ಯುತ್‌ ನಿಗಮ ಅನುಷ್ಠಾನಗೊಳಿಸುತ್ತಿರುವ 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಯೋಜನೆಗೆ ಅತ್ಯಂತ ಅಲ್ಪಾವಧಿಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ವಿದ್ಯುತ್‌ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗದ ತಲಕಳಲೆ ಮತ್ತು ಉತ್ತರ…