ತೆಲಂಗಾಣ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ಪತ್ರಿ ಕೆ.ಕವಿತಾ ಅವರನ್ನು ರಕ್ಷಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಆರ್ ಎಸ್ ಎಸ್ ಮುಖಂಡ ಬಿಎಲ್ ಸಂತೋಷ್ ಅವರನ್ನು ಬಂಧಿಸಲು ಮುಂದಾಗಿದ್ದರು ಎಂಬುದು ತಿಳಿದು ಬಂದಿದೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಪುತ್ರಿ ಕೆ.ಕವಿತಾ ಬಂಧನಕ್ಕೆ ಒಳಗಾಗಿದ್ದು, ಅವರನ್ನು ಪ್ರಕರಣದಿಂದ ಹೊರಗೆ ತರಲು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಆರ್ ಎಸ್ ಎಸ್ ಮುಖಂಡ ಬಿಎಲ್ ಸಂತೋಷ್ ಅವರನ್ನು ಬಂಧಿಸುವ ಮೂಲಕ ರಾಜೀ ಮಾಡಿಸಲು ಮಾಸ್ಟರ್ ಪ್ಲಾನ್ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ತೆಲಂಗಾಣ ಮಾಜಿ ಡೆಪ್ಯೂಟಿ ಕಮಿಷನರ್ ಪಿ.ರಾಧಾಕೃಷ್ಣ ರಾವ್ ಇಡಿ ವಿಚಾರಣೆ ವೇಳೆ 6 ಪುಟಗಳ ತಪ್ಪೊಪ್ಪಿಗೆ ಪತ್ರದಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ್ ಪುತ್ರಿಯ ರಕ್ಷಣೆಗೆ ಪೊಲೀಸ್ ಇಲಾಖೆಯನ್ನು ಬಳಸಿಕೊಂಡಿದ್ದಾರೆ ವಿವರಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ರಾಧಾಕೃಷ್ಣ ರಾವ್, ಬಿಜೆಪಿಯ ಕೆಲವು ಮುಖಂಡರನ್ನು ಕಟ್ಟಿ ಹಾಕಿದರೆ ಮಗಳನ್ನು ಬಚಾವ್ ಮಾಡಿಕೊಳ್ಳಬಹುದು ಒಳಗಿನ ಸತ್ಯ ಎಂದು ಹೇಳಿದ್ದಾರೆ.