ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಬಂಡವಾಳ ಹೂಡಿಕೆ ಬಗ್ಗೆ ಚರ್ಚಿಸಲು ಆಗಮಿಸಬೇಕಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಇಲಾನ್ ಮಸ್ಕ್ ಭಾರತ ಪ್ರವಾಸವನ್ನು ಮುಂದೂಡಿದ್ದಾರೆ.
ಸ್ಪೇಸ್ ಎಕ್ಸ್ ಸಿಇಒ ಕೂಡ ಆಗಿರುವ ಇಲಾನ್ ಮಸ್ಕ್ ಏಪ್ರಿಲ್ 21 ಮತ್ತು 22ರಂದು ಭಾರತಕ್ಕೆ ಭೇಟಿ ನೀಡಬೇಕಿತ್ತು. ಆದರೆ ಪ್ರವಾಸವನ್ನು ಹಲವು ಕಾರಣಗಳಿಗಾಗಿ ಮುಂದೂಡಲಾಗಿದ್ದು, ವರ್ಷಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಟೆಸ್ಲಾ ಕಂಪನಿಯ ಮೊದಲ ತ್ರೈಮಾಸಿಕ ಬೆಳವಣಿಗೆ ಕುರಿತು ಅಮೆರಿಕದ ಜೊತೆ ಏಪ್ರಿಲ್ 23 ರಂದು ಮಹತ್ವದ ಮಾತುಕತೆ ಇರುವುದರಿಂದ ಭಾರತ ಭೇಟಿಯನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಭಾರತದ ಭೇಟಿ ವೇಳೆ ಇಲಾನ್ ಮಸ್ಕ್ 2ರಿಂದ 3 ಶತಕೋಟಿ ಡಾಲರ್ ಬಂಡವಾಳ ಹೂಡಿಕೆ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚಿಸಬೇಕಿತ್ತು ಎಂದು ಹೇಳಲಾಗಿದೆ.