ಎರಡು ವರ್ಷಗಳ ಕಾಲ ದೇಶಾದ್ಯಂತ ಆತಂಕ ಸೃಷ್ಟಿಸಿದ್ದ ಕೋವಿಡ್ ಹೊಸ ರೂಪಾಂತರಿ ಎಕ್ಸ್ ಇಸಿ ವೈರಸ್ ಇದೀಗ ಯುರೋಪ್ ದಲ್ಲಿ ಅಬ್ಬರಿಸುತ್ತಿದ್ದು, ಮತ್ತೆ ಕೊರೊನಾ ಆತಂಕ ಮೂಡಿಸಿದೆ.
ಕೊರೊನಾದಿಂದ ರೂಪಾಂತರಗೊಂಡ ಒಮಿಕ್ರಾನ್ ನಿಂದ ರೂಪಾಂತರಗೊಂಡ ಎಕ್ಸ್ ಇಸಿ ವೈರಸ್ ಜರ್ಮನಿಯಲ್ಲಿ ಮೊದಲ ಬಾರಿ ಕಂಡು ಬಂದಿದ್ದು, ಕೆಲವೇ ಸಮಯದಲ್ಲಿ 13 ರಾಷ್ಟ್ರಗಳಿಗೆ ಅತ್ಯಂತ ವೇಗವಾಗಿ ಹರಡುತ್ತಿದೆ.
ಅತ್ಯಂತ ವೇಗವಾಗಿ ಮನುಷ್ಯರ ಅಂಗಾಂಗಳ ಮೇಲೆ ಪ್ರಭಾವ ಬೀರುತ್ತಿರುವ ಎಕ್ಸ್ ಇಸಿ ತಡೆಯಲು ಲಸಿಕೆ ಪಡೆಯಬೇಕು ಎಂದು ಸೂಚಿಸಲಾಗಿದೆ.
ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ಶೇ.17ರಷ್ಟು ಮತ್ತು ನೆದರ್ಲೆಂಡ್ಸ್ ನಲ್ಲಿ ಶೇ.11ರಿಂದ 13ರಷ್ಟು ಕೊರೊನಾ ರೂಪಾಂತರಿ ಹರಡುತ್ತಿದೆ.
ಗುಣಲಕ್ಷಣಗಳು
ಒಮಿಕ್ರಾನ್ ಮಾದರಿಯಲ್ಲಿ ಜ್ವರ, ಕಫ, ಗಂಟಲು ನೋವು, ತುರಿಕೆ, ಸುಸ್ತು ಹಾಗೂ ದೇಹದ ತೂಕ ಇಳಿಕೆ ಎಕ್ಸ್ ಇಸಿ ಸೋಂಕಿನ ಲಕ್ಷಣಗಳಾಗಿವೆ.