ಅಜಿತ್ ಪವಾರ್ ಬಣದ ಸಂಸದ ಪ್ರಯಾಣಿಸಬೇಕಿದ್ದ ಹೆಲಿಕಾಫ್ಟರ್ ಪುಣೆಯಲ್ಲಿ ಪತನಗೊಂಡಿದೆ. ಇಬ್ಬರು ಪೈಲೆಟ್ ಹಾಗೂ ಇಂಜಿನಿಯರ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ದೆಹಲಿ ಮೂಲದ ವಿಮಾನಯಾನ ಸಂಸ್ಥೆಯ ಹೆಲಿಕಾಫ್ಟರ್ ಅನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಗುತ್ತಿಗೆ ಪಡೆದಿತ್ತು. ಮಹಾರಾಷ್ಟ್ರದ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಸುನೀಲ್ ಟಾಟ್ಕೆರೆ ಈ ಹೆಲಿಕಾಫ್ಟರ್ ನಲ್ಲಿ ಪ್ರಯಾಣಿಸಬೇಕಿತ್ತು. ಒಂದು ದಿನ ಮುನ್ನ ಈ ಹೆಲಿಕಾಫ್ಟರ್ ನಲ್ಲಿ ಪ್ರಯಾಣಿಸಬೇಕಿದ್ದ ಸಂಸದ, ಬುಧವಾರ ಮತ್ತೆ ಪ್ರಯಾಣಿಸಬೇಕಿತ್ತು.
ಪುಣೆಯ ಆಕ್ಸ್ ಫರ್ಡ್ ಕೌಂಟಿ ಕ್ಲಬ್ ಹೆಲಿಪ್ಯಾಡ್ ನಿಂದ ಹೆಲಿಕಾಫ್ಟರ್ ಮುಂಬೈಗೆ ಬುಧವಾರ ಬೆಳಿಗ್ಗೆ 7.30ಕ್ಕೆ ಹೊರಟ್ಟಿತ್ತು. ಕೌಂಟಿ ಕ್ಲಬ್ ನಿಂದ 25 ಕಿ.ಮೀ. ದೂರದ ಬಾವ್ದಾನ್ ಪರ್ವತ ಪ್ರದೇಶದ ಬಳಿ ಪತನಗೊಂಡಿದೆ.
ಭಾರತೀಯ ವಾಯುಪಡೆಯ ನಿವೃತ್ತ ಪೈಲೆಟ್ ಗಳಾದ ಪರಮ್ ಜೀತ್ ಸಿಂಗ್ (62), ಜಿಕೆ ಪಿಳ್ಳೈ (57) ಮತ್ತು ಇಂಜಿನಿಯರ್ ಪ್ರೀತಮ್ ಕುಮಾರ್ ಭಾರಧ್ವಾಜ್ (53) ಮೃತಪಟ್ಟಿದ್ದಾರೆ.