ದೋಷಪೂರಿತ ಇರುವ ಕಾರು ವಿತರಿಸಿದ್ದಕ್ಕಾಗಿ ಗ್ರಾಹಕನಿಗೆ 50 ಲಕ್ಷ ರೂ. ದಂಡ ಪಾವತಿಸುವಂತೆ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ಬಿಎಂಡಬ್ಲ್ಯೂಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪರಿಡ್ವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಗ್ರಾಹಕನಿಗೆ ದೋಷ ಇರುವ ಕಾರು ನೀಡಿದ್ದಕ್ಕಾಗಿ ಹೊಸ ಕಾರು ನೀಡುವಂತೆ ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.
ಪ್ರಕರಣವನ್ನು ಸಂಪೂರ್ಣವಾಗಿ ಅವಲೋಕಿಸಿದಾಗ ಬಿಎಂಡಬ್ಲ್ಯೂ ಇಂಡಿಯಾ ಪ್ರವೇಟ್ ಲಿಮಿಟೆಡ್ ಕಂಪನಿ ಗ್ರಾಹಕನಿಗೆ ದೋಷ ಇರುವ ಕಾರು ನೀಡಿದ್ದಕ್ಕಾಗಿ ಒಂದೇ ಕಂತಿನಲ್ಲಿ 50 ಲಕ್ಷ ರೂ. ದಂಡ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಗ್ರಾಹಕನಿಗೆ 2024, ಆಗಸ್ಟ್ 10ರೊಳಗೆ ಒಂದೇ ಕಂತಿನಲ್ಲಿ ಆನ್ ಲೈನ್ ಮೂಲಕ ಪಾವತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.