ಅಕ್ರಮ ನಿವೇಶನ ಸೇರಿದಂತೆ ಯಾವುದೇ ಕಾರಣಕ್ಕೂ ದೇಶದ ಯಾವುದೇ ಭಾಗದಲ್ಲೂ ಅಕ್ಟೋಬರ್ 1ರವರೆಗೆ `ಬುಲ್ಡೋಜರ್’ ಹರಿಸಬಾರದು ಎಂದು ಸುಪ್ರೀಂಕೋರ್ಟ್ ತಡೆ ನೀಡಿದೆ.
ದೇಶಾದ್ಯಂತ ಸದ್ದು ಮಾಡುತ್ತಿರುವ ಬುಲ್ಡೋಜರ್ ನ್ಯಾಯದ ಕುರಿತು ಮುಂದಿನ ವಿಚಾರಣೆ ಆಗುವುವರೆಗೂ ಯಾವುದೇ ಬುಲ್ಡೋಜರ್ ಸದ್ದು ಮಾಡಬಾರದು ಎಂದು ಸುಪ್ರೀಂಕೋರ್ಟ್ ಮಂಗಳವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಬುಲ್ಡೋಜರ್ ನ್ಯಾಯಕ್ಕೆ ತಡೆ ನೀಡಿದರೆ ನರಕ ಏನು ಕೆಳಗಿಳಿದು ಬರುವುದಿಲ್ಲ. ಮುಂದಿನ ಆದೇಶದ ವರೆಗೂ ಬುಲ್ಡೋಜರ್ ಹರಿಸುವ ಕ್ರಮಗಳಿಗೆ ತಡೆ ನೀಡಿ ಎಂದು ಸೂಚಿಸಿದೆ.
ನ್ಯಾಯಾಲಯದ ಅನುಮತಿ ಇಲ್ಲದೇ ಮುಂದಿನ ಆದೇಶದವರೆಗೂ ಬುಲ್ಡೋಜರ್ ಹರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಇದರೊಂದಿಗೆ ದೇಶಾದ್ಯಂತ ಬುಲ್ಡೋಜರ್ ಸಂಸ್ಕೃತಿಗೆ ಹೆಚ್ಚು ಪ್ರಚಾರ ಪಡೆಯುತ್ತಿರುವುದು ಮತ್ತು ಇದೇ ಸರಿಯಾದ ಮಾರ್ಗ ಎಂದು ಬಿಜೆಪಿ ಆಡಳಿತಗಳು ಬಿಂಬಿಸಿಕೊಳ್ಳುತ್ತಿರುವ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.