ರೈಲ್ವೆ ಹಳಿ ಮೇಲೆ 6 ಕೆಜಿ ತೂಕದ ಬೃಹತ್ ಮರದ ತುಂಡಿಗೆ ರೈಲು ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ದುಷ್ಕರ್ಮಿಗಳು ಕೃತ್ಯ ಇದಾಗಿರಬೇಕು ಎಂದು ಶಂಕಿಸಲಾಗಿದೆ.
ಗುರುವಾರ ರಾತ್ರಿ ಉತ್ತರ ಪ್ರದೇಶದ ದೆಹಲಿ ಮತ್ತು ಲಕ್ನೋ ನಡುವೆ ಸಂಚರಿಸುವ ಬರೇಲಿ-ವಾರಣಾಸಿ ಎಕ್ಸ್ ಪ್ರೆಸ್ ಪ್ರಯಾಣಿಕ ರೈಲು ಸುಮಾರು 2 ಅಡಿ ಉದ್ದದ ಮರದ ತುಂಡಿಗೆ ಡಿಕ್ಕಿ ಹೊಡೆದಿದೆ.
ರೈಲು ಮರದ ತುಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲು ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿದೆ. ಪೈಲೆಟ್ ಸಮಯಪ್ರಜ್ಞೆಯಿಂದ ರೈಲು ಅಪಾಯವಿಲ್ಲದೇ ನಿಂತಿದೆ. ಇಂಜಿನ್ ನ ಕೆಳಭಾಗದಲ್ಲಿ ಸ್ವಲ್ಪ ಸ್ಪರ್ಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ರೈಲ್ವೆ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿತ್ತು. ನಂತರ 10 ಡಿಟೊನೇಟರ್ ಸ್ಫೋಟಕಗಳು ಪತ್ತೆಯಾದ ನಂತರ ಮರದ ತುಂಡು ಪತ್ತೆಯಾಗಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಮರದ ತುಂಡು ಹಾಕಿರಬೇಕು ಎಂದು ಶಂಕಿಸಲಾಗಿದೆ.