ಮುಂದಿನ ಜೂನ್ ತಿಂಗಳಲ್ಲಿ ಭಾರತದಲ್ಲಿ ಮುಂಗಾರು ಸಾಮಾನ್ಯಕ್ಕಿಂತ ಅಧಿಕವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ ತಿಂಗಳಲ್ಲಿ ಆರಂಭವಾಗುವ ಮುಂಗಾರು ಈ ಬಾರಿ ಶೇ.106ರಷ್ಟು ಆಗಲಿದ್ದು, 87 ಸೆಂಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
1951ರಿಂದ 2023ರ ಅವಧಿಯಲ್ಲಿ ಅಮೆರಿಕದಲ್ಲಿ ಲಾ ಲೀಗ ಮತ್ತು ಎಲ್ ನೀನೋ ಚಂಡಮಾರುತದ ಅಬ್ಬರದ ದಾಖಲೆಗಳನ್ನು ಗಮನಿಸಿದರೆ ಭಾರತದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಲಿದೆ. ಎರಡು ಚಂಡಮಾರುತಗಳು ಕಾಣಿಸಿಕೊಂಡಾಗಲೆಲ್ಲಾ ಭಾರತದಲ್ಲಿ ಹೆಚ್ಚು ಮಳೆಯಾಗಿದೆ ಎಂದು ವರದಿ ವಿವರಿಸಿದೆ.
ಭಾರತದಲ್ಲಿ ಮುಂಗಾರು ಅವಧಿಯಾದ ಜೂನ್ ನಿಂದ ಸೆಪ್ಟೆಂಬರ್ ವರೆಗಿನ 4 ತಿಂಗಳ ಅವಧಿಯಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ.
ಕಳೆದ ವರ್ಷ ಚಂಡಮಾರುತ ಗುಜರಾತ್ ಕಡೆ ತಿರುಗಿದ್ದರಿಂದ ಸಾಮಾನ್ಯಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿತ್ತು. 2023ರಲ್ಲಿ ಚಂಡಮಾರುತದ ಪರಿಣಾಮ ಇಲ್ಲದ ಕಾರಣ ಸಾಮಾನ್ಯ ಮಳೆಯ ಪ್ರಮಾಣವಾದ 868 ಮಿ.ಮೀ.ಗಿಂತ ಕಡಿಮೆ 820 ಮಿ.ಮೀ. ಮಳೆಯಾಗಿತ್ತು.