ಹಣಕಾಸಿನ ಸಮಸ್ಯೆ, ಬಾಧೆಗಳಿಂದ ಬಳಲುತ್ತಿರುವವರು ಯಾವುದಾದರೂ ಶುಕ್ರವಾರದಿಂದ ಪ್ರಾರಂಭಿಸಿ, ನಿತ್ಯನಿಯಮಿತವಾಗಿ ಗೋಧೂಳಿಯ ಸಮಯದಲ್ಲಿ ಮಹಾಲಕ್ಮೀದೇವಿಯ ಚಿತ್ರಪಟದ ಅಥವಾ ತುಳಸಿ ವೃಕ್ಷದ ಬಳಿ ತುಪ್ಪದ ದೀಪವನ್ನು ಬೆಳಗಿಸಿ. ಇದರಿಂದ ಧನದ ಅವಕಾಶಗಳು ನಿಮ್ಮನರಸಿ ಬರುತ್ತವೆ.
ಅನಿರೀಕ್ಷಿತ ಧನಪ್ರಾಪ್ತಿಯಾಗಿ ಕಾಳುಮೆಣಸಿನ ಕಾಳುಗಳನ್ನು ತೆಗೆದುಕೊಂಡು ನಿಮ್ಮ ಶಿರದ ಮೇಲೆ ಏಳು ಬಾರಿ ನಿವಾಳಿಸಿ, ಅವುಗಳಲ್ಲಿ ನಾಲ್ಕು ಕಾಳುಗಳನ್ನು ನಾಲ್ಕು ದಿಕ್ಕಿನಲ್ಲಿ ಎಸೆಯಬೇಕು. ಹಾಗೂ ಐದನೆ ಕಾಳನ್ನು ಆಕಾಶದಲ್ಲಿ ಎಸೆಯಬೇಕು. ಈ ಉಪಾಯದಿಂದ ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆ.
ತಮ್ಮ ಮನದಲ್ಲಿರುವ ಇಚ್ಛೆಯನ್ನು ಹೇಳಿಕೊಳ್ಳುತ್ತಾ, ವಟವೃಕ್ಷದ ಬಳಿ ತೆರಳಿ, ವಟವೃಕ್ಷದ ಬೇರುಗಳನ್ನು ಹಿಡಿದು ಗಂಟು ಹಾಕಬೇಕು. ಧನಲಾಭದ ನಂತರ ಈ ಗಂಟನ್ನು ಬಿಚ್ಚಬೇಕು. ಒಂದು ವೇಳೆ ಶುಕ್ರವಾರದಂದು ಎಲ್ಲಿಯಾದರೂ ನಾಣ್ಯ ಸಿಕ್ಕರೆ ಅದನ್ನು ಕೆಂಪುವರ್ಣದ ರೇಷ್ಮೆ ವಸ್ತ್ರದಲ್ಲಿ ಗಂಟು ಹಾಕಿ ತಿಜೋರಿಯಲ್ಲಿ ಸ್ಥಿರವಾಗಿ ಇಡಬೇಕು.
ಶ್ರೀಲಕ್ಷ್ಮೀದೇವಿಯ ಚಿತ್ರಪಟ ಅಥವಾ ಪ್ರತಿಮೆಗೆ ಹಳದಿ ಪುಷ್ಪಗಳನ್ನು ಅರ್ಪಿಸಿ, ತುಪ್ಪದ ದೀಪ ಹಚ್ಚಬೇಕು. ಅರಳೀ ವೃಕ್ಷದ ಮೂಲದಲ್ಲಿ ಸಾಸಿವೆ ಎಣ್ಣೆಯ ದೀಪ ಬೆಳಗಿಸಿ ಅದನ್ನು ತಿರುಗಿ ನೋಡದೆ ವಾಪಸ್ ಮನೆಗೆ ಬರಬೇಕು. ಇದರಿಂದ ಧನಲಾಭವಾಗುತ್ತದೆ.
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ 108 ಬಿಲ್ವಪತ್ರಗಳ ಮೇಲೆ ಓಂ ನಮಃ ಶಿವಾಯ ಮಂತ್ರವನ್ನು ಬರೆದು ಅದನ್ನು ಉಚ್ಛರಿಸುತ್ತಾ, ಒಂದೊಂದೇ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುಬೇಕು. ಈ ಕಾರ್ಯವನ್ನು ನಿಯಮಿತವನ್ನು 31 ದಿನಗಳ ಕಾಲ ಮಾಡುವುದರಿಂದ ವ್ಯಕ್ತಿ ಧನಲಾಭವಾಗುತ್ತದೆ.
ತಾಮ್ರ ಪತ್ರದ ಮೇಲೆ ನಿರ‍್ಮಿತ ಹಾಗೂ ಪ್ರಾಣಪ್ರತಿಷ್ಠಿತ ಶ್ರೀಯಂತ್ರವನ್ನು ಮನೆಯ ಈಶಾನ್ಯ ಕೋನದಲ್ಲಿ ಸ್ಥಾಪಿಸಿ ಧೂಪ-ದೀಪಾದಿಗಳಿಂದ ಶ್ರೀಲಕ್ಮೀದೇವಿಗೆ ಪೂಜೆ ಸಲ್ಲಿಸಬೇಕು.