ಚಂದ್ರಯಾನ-4, ಶುಕ್ರ ಗ್ರಹದ ಅಧ್ಯಯನ ಹಾಗೂ ಬಾಹ್ಯಕಾಶ ನಿಲ್ದಾಣಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ)ಗೆ ಬಂಪರ್ ಅನುದಾನ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಒಂದು ದೇಶ, ಒಂದು ಚುನಾವಣೆಗೆ ಮಾಜಿ ರಾಷ್ಟ್ರಪತಿ ಕೋವಿಂದ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಅಂಗೀಕರಿಸಲಾಯಿತು.
ಚಂದ್ರಯಾನ-3 ಯಶಸ್ವಿಯಾಗಿ ಪೂರ್ಣಗೊಳಿಸಿರುವ ಇಸ್ರೊ ಪ್ರಸ್ತುತ ಗಗನಯಾನದತ್ತ ಗಮನ ಕೇಂದ್ರೀಕರಿಸಿದೆ. ಮಾನವ ರಹಿತ ಹಾಗೂ ಮಾನವ ಸಹಿತ ಗಗನಯಾನಕ್ಕೆ ಇಸ್ರೊ ಅಂತಿಮ ಹಂತದ ಸಿದ್ಧತೆ ನಡೆದಿರುವ ಮಧ್ಯೆಯೇ ಚಂದ್ರಯಾನ-4 ಯೋಜನೆಗೆ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.
ಇದೇ ವೇಳೆ ಮುಂದಿನ ತಲೆಮಾರಿನ ಬಾಹ್ಯಕಾಶ ನೌಕೆ ಸಿದ್ಧಪಡಿಸುವುದು ಹಾಗೂ ತಮ್ಮದೇ ಆದ ಬಾಹ್ಯಕಾಶ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಏನಿದು ಚಂದ್ರಯಾನ-4?
ಚಂದ್ರಯಾನ ಯೋಜನೆಯ ಮುಂದುವರಿದ ಅಂಗವಾಗಿ ಚಂದ್ರಯಾನ-4 ಯೋಜನೆ ಇದಾಗಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಡಿಂಗ್ ಮತ್ತು ಭೂಮಿಗೆ ಉಪಗ್ರಹ ವಾಪಸ್ ಕರೆತರುವ ಯೋಜನೆ ಇದಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಚಂದ್ರನ ಮೇಲೆ ಉಪಗ್ರಹ ಇಳಿಸಿದ್ದರೂ ಸಂಶೋಧನೆ ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ.
ಶುಕ್ರನ ಮೇಲ್ಮೈ ಕಾರ್ಯಾಚರಣೆ
ವೀನಸ್ ಆರ್ಬಿಟರ್ ಮಿಷನ್ (VOM) ಅಂದರೆ ಶುಕ್ರ ಗ್ರಹದ ವಾತಾವರಣ ಮತ್ತು ಭೂವಿಜ್ಞಾನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವೈಜ್ಞಾನಿಕ ಪರಿಶೋಧನೆಯ ಮೇಲೆ ಕೇಂದ್ರೀಕರಿಸುತ್ತದೆ. ಗ್ರಹದ ವಿಸ್ತೀರ್ಣ ಅದರ ಮೇಲ್ಮೈ ವಾತಾವರಣದ ಆಕಾರ ಕುರಿತು ವೈಜ್ಞಾನಿಕ ತನಿಖೆ ಮುಂದುವರಿಯಲಿದೆ.
2028ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ
ವೈಜ್ಞಾನಿಕ ಸಂಶೋಧನೆಗಾಗಿ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವಾದ ಭಾರತೀಯ ಅಂತರಿಕ್ಷ ನಿಲ್ದಾಣದ ಬಗ್ಗೆ ಈಗಾಗಲೇ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಸ್ತುತ ಅಮೆರಿಕ ಮತ್ತು ಚೀನಾದ 2 ಕಾರ್ಯ ನಿರ್ವಹಿಸುತ್ತಿರುವ ಬಾಹ್ಯಾಕಾಶ ಕೇಂದ್ರಗಳು ಇವೆ. 2028ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಕಾಶ ನಿಲ್ದಾಣ ಸ್ಥಾಪಿಸುವ ಗುರಿ ಹೊಂದಿದೆ.
ಗಗನಯಾನ ಕಾರ್ಯಾಚರಣೆ
ಗಗನಯಾನ ಮುಂದುವರಿದ ಯೋಜನೆಗಳು ಹಾಗೂ ಮುಂದಿನ ತಲೆಮಾರಿದ ಉಡಾವಣಾ ವಾಹನದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರೀಕ್ಷೆಯನ್ನು ಪೂರ್ಣಗೊಳಿಸಿದೆ.