ಕರ್ನಾಟಕದ ಎರಡು ಜಿಲ್ಲೆಗಳಾದ ಮಂಡ್ಯ ಮತ್ತು ಯಾದಗಿರಿಯಲ್ಲಿ 1600 ಟನ್ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಭೂ ವಿಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಶುಕ್ರವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗಣಿ ಪತ್ತೆ ಮತ್ತು ಸಂಶೋಧನಾ ಅಟೊಮಿಕ್ ಮಿನರಲ್ ನಿರ್ದೇಶನಾಲಯ ಮಂಡ್ಯ ಮತ್ತು ಯಾದಗಿರಿಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆ ಹಚ್ಚಿದೆ ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಾರ್ಲಗಾಳದಲ್ಲಿ ಮತ್ತು ಯಾದಗಿರಿಯಲ್ಲಿ ನಿಕ್ಷೇಪ ಪತ್ತೆ ಹಚ್ಚಿದೆ. ಇದೇ ವೇಳೆ ಛತ್ತೀಸಘಡದ ಕೋಬ್ರಾ ಜಿಲ್ಲೆಯಲ್ಲಿ ಕೂಡ ನಿಕ್ಷೇಪದ ಸುಳಿವು ಸಿಕ್ಕಿದೆ. ರಾಜಸ್ಥಾನ, ಬಿಹಾರ ಮತ್ತು ಆಂಧ್ರಪ್ರದೇಶಗಳಲ್ಲೂ ಕೂಡ ನಿಕ್ಷೇಪಗಳ ಸುಳಿವು ಸಿಕ್ಕಿದೆ ಎಂದು ಅವರು ವಿವರಿಸಿದರು.