Friday, November 22, 2024
Google search engine
Homeತಾಜಾ ಸುದ್ದಿಶೇಖ್ ಹಸೀನಾ ಸ್ಥಿತಿ ಅತಂತ್ರ: ರಾಜಾಶ್ರಯ ನೀಡಲು ಒಪ್ಪದ ಬ್ರಿಟನ್, ಅಮೆರಿಕದಿಂದ ವೀಸಾ ರದ್ದು!

ಶೇಖ್ ಹಸೀನಾ ಸ್ಥಿತಿ ಅತಂತ್ರ: ರಾಜಾಶ್ರಯ ನೀಡಲು ಒಪ್ಪದ ಬ್ರಿಟನ್, ಅಮೆರಿಕದಿಂದ ವೀಸಾ ರದ್ದು!

ಬಾಂಗ್ಲಾದೇಶ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿರುವ ಶೇಖ್ ಹಸೀನಾ ಅತಂತ್ರ ಸ್ಥಿತಿಗೆ ಒಳಗಾಗಿದ್ದಾರೆ.

ರಾಜಾಶ್ರಯ ಅಥವಾ ತಾತ್ಕಾಲಿಕ ಆಶ್ರಯ ನೀಡಲು ಮಾಡಿದ್ದ ಮನವಿಯನ್ನು ಬ್ರಿಟನ್ ಸರ್ಕಾರ ತಳ್ಳಿ ಹಾಕಿದ್ದು, ವೈಯಕ್ತಿಕವಾಗಿ ಯಾವುದೇ ವ್ಯಕ್ತಿಗೆ ರಾಜಾಶ್ರಯ ಅಥವಾ ತಾತ್ಕಾಲಿಕ ಆಶ್ರಯ ನೀಡಲು ವಲಸೆ ನಿಯಮ ಒಪ್ಪುವುದಿಲ್ಲ ಎಂದು ಹೇಳಿದೆ.

ಬ್ರಿಟನ್ ನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರಸ್ತುತ ವಲಸಿಗರ ಸಮಸ್ಯೆಯಿಂದ ಗಲಭೆ ಸ್ಥಿತಿಯನ್ನು ಬ್ರಿಟನ್ ಎದುರಿಸುತ್ತಿದ್ದು, ಅಕ್ರಮ ವಲಸಿಗರ ತಡೆಗೆ 8000 ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಿದೆ.

ಇದೇ ವೇಳೆ ಶೇಖ್ ಹಸೀನಾ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಇದರಿಂದ ಅಮೆರಿಕಕ್ಕೆ ವಲಸೆ ಹೋಗುವ ಸಾಧ್ಯತೆಯೂ ಇಲ್ಲದಂತಾಗಿದೆ.

ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರ ಹಿಂಸಾಚಾರದಿಂದ ಭಾರತಕ್ಕೆ ವಲಸೆ ಬಂದಿರುವ ಶೇಖ್ ಹಸೀನಾ ಲಂಡನ್ ಗೆ ಪ್ರಯಾಣಿಸಬೇಕಿತ್ತು. ಆದರೆ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ.

ಶೇಖ್ ಹಸೀನಾ ಅವರನ್ನು ದೆಹಲಿ ಸಮೀಪದ ಹಿಂಡಗ್ ವಾಯುನೆಲೆಯಲ್ಲಿ ಬಿಟ್ಟು ಬಾಂಗ್ಲಾಕ್ಕೆ ವಿಮಾನ ವಾಪಸ್ಸಾಗಿದೆ. ಇದೀಗ ದೆಹಲಿ ಸಮೀಪದ ಗೌಪ್ಯ ಸ್ಥಳದಲ್ಲಿ ಶೇಖ್ ಹಸೀನಾ ವಾಸವಾಗಿದ್ದು, ಅವರಿಗೆ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments