ಪತಿಯಿಂದ ಮಾಸಿಕ 6.16 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟ ಮಹಿಳೆಗೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಚಾಟಿ ಬೀಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.
ವಿಚ್ಛೇದಿತ ಮಹಿಳೆ ರಾಧಾ ಮುನುಕುಂಟ್ಲಾ ತನಗೆ ಪತಿಯಿಂದ ತಿಂಗಳ ಖರ್ಚಿಗಾಗಿ ಮಾಸಿಕ 6.16 ಲಕ್ಷ ರೂ. ಜೀವನಾಂಶ ಕೊಡಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಆಗಸ್ಟ್ 20 ರಂದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರು ನಿಮಗೆ ಅಷ್ಟೊಂದು ಅಗತ್ಯವಿದ್ದರೆ ನೀವೇ ಸಂಪಾದಿಸಿ ಎಂದು ಹೇಳಿದೆ.
ಹಿಂದೂ ವಿವಾಹ ಕಾಯಿದೆ, 1955 ರ ಸೆಕ್ಷನ್ 24 ರ ಅಡಿಯಲ್ಲಿ ಹಣಕಾಸಿನ ಜೀವನಾಂಶ ಕೋರಿದ್ದ ಮಹಿಳೆ ಮಾಸಿಕ 6.16 ಲಕ್ಷ ರೂ. ಮಾಸಿಕ ವೆಚ್ಚದ ಪಟ್ಟಿ ನೋಡಿ ನ್ಯಾಯಾಧೀಶರೇ ಆಘಾತಕ್ಕೆ ಒಳಗಾಗಿದ್ದಾರೆ. ವಿಶೇಷ ಅಂದರೆ ಮಕ್ಕಳ ನ್ನು ನೋಡಿಕೊಳ್ಳಲು ಅಥವಾ ಇತರೆ ಯಾವುದೇ ಖರ್ಚು ತೋರಿಸದೇ ತನ್ನೊಬ್ಬಳ ಖರ್ಚು ನೋಡಿ ಅಚ್ಚರಿ ವ್ಯಕ್ತಪಡಿಸಿದರು.
ಮಹಿಳೆ ಮಂಡಿ ನೋವು ಮತ್ತು ಫಿಜಿಯೋಥೆರಪಿ ಚಿಕಿತ್ಸೆಗೆ 4ರಿಂದ 5 ಲಕ್ಷ ರೂ., ಶೂ, ಚಪ್ಪಲಿ, ಡ್ರೆಸ್ ಖರೀದಿಗೆ 15 ಸಾವಿರ ರೂ., ಮನೆಯಲ್ಲಿ ಮಾಡಿದ ಆಹಾರ ಸೇವಿಸಲು 60 ಸಾವಿರ ರೂ., ಹೊರಗೆ ಊಟ ಮಾಡಲು 5000 ರೂ. ಸೇರಿದಂತೆ ಒಟ್ಟಾರೆ 6,16,300 ರೂ. ಮಾಸಿಕ ಜೀವನಾಂಶ ಕೊಡಬೇಕು ಎಂದು ಮನವಿ ಮಾಡಿದ್ದರು.
ತಿಂಗಳಿಗೆ ರೂ. 6,16,300! ಯಾರಾದರೂ ಇಷ್ಟು ಖರ್ಚು ಮಾಡುತ್ತಾರೆಯೇ? ಒಬ್ಬ ಮಹಿಳೆ ತನಗಾಗಿ ಇಷ್ಟೊಂದು ಖರ್ಚು ಮಾಡುತ್ತಾಳೆಯೇ? ನಿಮಗೆ ಸಂಸಾರದ ಬೇರಾವ ಜವಾಬ್ದಾರಿಯೂ ಇಲ್ಲ. ಮಕ್ಕಳನ್ನು ನೋಡಿಕೊಳ್ಳಬೇಕಿಲ್ಲ. ಅದು ನಿನಗೇ ಬೇಕು. ಇದು ಒಂದು ರೀತಿಯಲ್ಲಿ ಗಂಡನನ್ನು ಶೋಷಿಸುವುದಾಗಿದೆ. ನಿಮಗೆ ಅಷ್ಟೊಂದು ಖರ್ಚು ಮಾಡಬೇಕೆಂದಿದ್ದರೆ ನೀವೇ ದುಡಿದು ಸಂಪಾದಿಸಿ. ಬೇರೆಯವರ ದುಡ್ಡಿನಲ್ಲಿ ಯಾಕೆ ಎಂದು ಖಾರವಾಗಿ ನ್ಯಾಯಾಧೀಶರು ಪ್ರಶ್ನಿಸಿದರು.
ಜೀವನಾಂಶ ಕೇಳಲು ಒಂದು ಮಿತಿ ಇದೆ. ಒಬ್ಬಂಟಿ ಮಹಿಳೆಗೆ ಎಷ್ಟು ಖರ್ಚು ಮಾಡಬಹುದು. ಇದರಲ್ಲಿ ಮಕ್ಕಳನ್ನು ನೋಡಿಕೊಳ್ಳುವುದಾಗಿ ಅಥವಾ ಬೇರೋಂದು ಖರ್ಚು ತೋರಿಸಿಲ್ಲ. ಒಂದು ವೇಳೆ ನೀವು ಮನವಿ ಸಲ್ಲಿಸುವಾಗ ಇತಿಮಿತಿ ಅರಿತುಕೊಂಡು ಜೀವನಾಂಶ ಕೇಳಿ. ಇದು ಕೊನೆಯ ಎಚ್ಚರಿಕೆ. ಇಲ್ಲದಿದ್ದರೆ ಅರ್ಜಿಯನ್ನು ವಜಾ ಮಾಡಬೇಕಾಗುತ್ತದೆ ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ.
https://twitter.com/DeepikaBhardwaj/status/1826237815962907135