ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಕೂಚ್ ಬಿಹಾರ್ ಟ್ರೋಫಿಗಾಗಿ ನಡೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದಾರೆ.
ಶಿಲ್ಲಾಂಗ್ ನಲ್ಲಿ ಗುರುವಾರ 19 ವರ್ಷದೊಳಗಿನವರ ನಾಲ್ಕು ದಿನಗಳ ಪಂದ್ಯದಲ್ಲಿ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ 17 ವರ್ಷದ ಆರ್ಯವೀರ್ 229 ಎಸೆತಗಳಲ್ಲಿ ಅಜೇಯ 200 ರನ್ ಬಾರಿಸಿದ್ದಾರೆ.
ಮೇಘಾಲಯ ತಂಡ ಮೊದಲ ಇನಿಂಗ್ಸ್ ನಲ್ಲಿ 260 ರನ್ ಬಾರಿಸಿದರೆ, ಆರ್ಯವೀರ್ ಶತಕದ ನೆರವಿನಿಂದ ದೆಹಲಿ ತಂಡ 468 ರನ್ ಗಳಿಸಿದ್ದು, 208 ರನ್ ಗಳ ಮುನ್ನಡೆ ಸಾಧಿಸಿದೆ.
ಆರ್ಯವೀರ್ ಮತ್ತು ಅರ್ನವ್ ಮೊದಲ ವಿಕೆಟ್ ಗೆ 180 ರನ್ ಜೊತೆಯಾಟದಿಂದ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಅರ್ನವ್ 90 ಎಸೆತಗಳಲ್ಲಿ 98 ರನ್ ಬಾರಿಸಿದರು.